Skip to main content

Posts

Showing posts from July, 2026

ತೇಜಸ್ವಿ ಪ್ರಸಂಗಗಳು

  ತೇಜಸ್ವಿಯವರನ್ನೊಮ್ಮೆ ಭೇಟಿ ಮಾಡಿದಾಗ ಅವರು ತುಂಬಾ ಸಾವಧಾನವಾಗಿ ಮಾತನಾಡುತ್ತಿದ್ದರು. ಅದು ಅವರ ಪಕ್ಷಿಗಳ ಫೋಟೋ ಪ್ರದರ್ಶನ ಕಾರ್ಯಕ್ರಮ “ಚಿತ್ರಕಲಾ ಪರಿಷತ್ತಿನಲ್ಲಿ”. ಅವತ್ತು ತಪ್ಪಿಸಿಕೊಂಡು ತಿರುಗುತ್ತಿದ್ದ ಪಕ್ಷಿಯೊಂದರ ಬಗ್ಗೆ ಅವರು ಹೇಳಿದ್ದು, ಅದರ ಕಷ್ಟ ಕೋಟಲೆಗಳು, ಅದಕ್ಕೆ ಬೇಕಾಗುವ ತಾಳ್ಮೆ, ಏಕಾಗ್ರತೆ, ದುಬಾರಿ ಕ್ಯಾಮೆರಾ ಮತ್ತದರ ಲೆನ್ಸ್ ಗಳು, ಫೋಟೋ ತೆಗೆದನಂತರ ಮಾಡುವ ಡಿಜಿಟಲ್ ಬದಲಾವಣೆಗಳು ಇತ್ಯಾದಿ.  ಅವರನ್ನು ಶಾರ್ಟ್ ಟೆಂಪೆರ್ ಅನ್ನುತ್ತಿದ್ದವರಿಗೆ ಇದೆಲ್ಲ ಅರ್ಥವಾದರೆ ಅದು ಬೇರೆಯೇ ಸಾಧ್ಯತೆಗಳನ್ನ ಹೊಮ್ಮಿಸೀತು ಅನ್ನಿಸಿದೆ ನನಗೆ. ಮಾಯಾಲೋಕ - ೧ ಬಂದಾಗ ಅದನ್ನು ಓದಿ ನಂತರ ಅಂತಹಾ ಎಂಟು ಲೋಕಗಳನ್ನು ಬರೆಯುವ ಅವರ ಯೋಜನೆಯನ್ನು ಎಲ್ಲೋ ಕೇಳಿ ಕಾತರಿಸಿದ್ದೆವು ಆದರೆ ಅವರೇ ಇಲ್ಲವಾದರು!  ಅರ್ಬನ್ ಪರಿಸರದಲ್ಲಿ ಹುಟ್ಟಿದ ಹುಡುಗರಿಗೆ ಅವರು ನೋಡಿರದ ಲೋಕವೊಂದರ ಅನೂಹ್ಯತೆಯನ್ನ ಹಾಗೆಯೇ ಸೆಮಿ ಅರ್ಬನ್ ಅಥವಾ ಹಳ್ಳಿ ಗಳಲ್ಲಿ ಹುಟ್ಟಿ ಪಟ್ಟಣಕ್ಕೆ ಬಂದ ಹುಡುಗ/ಗಿಯರಿಗೆ ಅವರು ಬಿಟ್ಟು ಬಂದ ಮತ್ತು ಬಹುಶ ಮತ್ತೆ ಹೋಗಲಾಗದ (?) ಪರಿಸರವೊಂದರ ಅದರ ಅಗಾಧ ಸೆಳೆತವನ್ನ ತೇಜಸ್ವಿಯವರ ಬರಹಗಳು ಉಳಿಸಿಕೊಂಡಿರುವುದರಿಂದ ಅದು ಇವತ್ತಿಗೂ ತನ್ನ ಸೆಳೆತವನ್ನು ಹೆಚ್ಚಿಸಿಕೊಳ್ಳುತ್ತಿದೆ. ನಾವು ಬಯಸಿದ ಆದರೆ ಬದುಕಲಾರದ ಬದುಕು ಸದಾ ಸೆಳೆಯುತ್ತಲೇ ಇರುತ್ತದೆ ಥೇಟ್ ತೇಜಸ್ವಿಯ ಹಾಗೇ! ಇಲ್ಲಿರುವ ಎಲ್ಲ ಪ್ರಸಂಗಗಳೂ ಅವರನ...

ದೇವರ ತೇರಿಗೂ ಗಾಲಿಗಳು ಬೇಕು!

  ದೇವರ ತೇರಿಗೂ ಗಾಲಿಗಳು ಬೇಕು… “ಮರದೊಳಗಡಗಿದ ಬೆಂಕಿಯಂತೆ  ಎಲ್ಲೋ ಅಡಗಿದೆ ಬೇಸರ  ಏನೋ ತೀಡಲು ಏನೋ ಕಾಡಲು  ಹೊತ್ತಿ ಉರಿವುದು ಕಾತರ “ ….ಗೋ ಕೃಷ್ಣ ಅಡಿಗ  ಭವ್ಯರ ಕವನಗಳನ್ನ ನಾನು ಮೊದಲು ಓದಿದ್ದು ಅವಧಿ ತಾಣದಲ್ಲಿ. ಬಹುಶ ಬುದ್ಧನ ಬಗ್ಗೆ ಅನ್ನಿಸುತ್ತದೆ.  ಅವರು ಬುದ್ಧನನ್ನ reimagine ಮಾಡಿದ್ದರು. ನಂತರ ಅವರ ನೇರ ವಾಚನವನ್ನ ಸುಚಿತ್ರದಲ್ಲಿ ಕೇಳಿದ್ದು.  ಅವತ್ತು ಜಿ ಏನ್ ಮೋಹನ್ ಸರ್ ಮತ್ತು ಉಮಾ ಮುಕುಂದ ಅವರೂ ಕೂಡಾ ತಮ್ಮ ತಮ್ಮ ಕವನಗಳನ್ನ ಓದಿದ್ದರು. ಭವ್ಯ ನನಗೆ ನಮ್ಮಂತೆ ಅನ್ನಿಸಿದ್ದರು…ಅಂದರೆ ಈಗೀಗ ಕಾವ್ಯ ಸಹವಾಸದಲ್ಲಿರುವವರು “ ಬರೆದ ಸಾಲಿಗೆ, ಹೊಳೆದ ತಾರೆಗೆ ನಿಬ್ಬೆರಗಾಗೋ ರೀತಿ!” ಒಂದೇ ಆಗಿತ್ತು.  ಅವತ್ತು ಅವರು ತಮ್ಮಲ್ಲಿ ಕವಿತೆ ಹುಟ್ಟುವಿಕೆಯ ಕಿಡಿಯ ಬಗ್ಗೆ ಹೇಳಿಕೊಂಡಿದ್ದರು. ಅವರು ಕವಿತೆಯನ್ನ ಬರೆದಷ್ಟೇ ಚೆನ್ನಾಗಿ ಓದುತ್ತಾರೆ ಅನ್ನಿಸಿತು. ಅವೆಲ್ಲವನ್ನ ಪುಸ್ತಕ ರೂಪದಲ್ಲಿ ತರಲು ಸಾಕಷ್ಟು ಸಮಯ ಕೊಂಡರು ಅನ್ನಿಸಿದರೂ, ಈ ಸಂಕಲನದ ಪರಿಚಯದ ಮಾತುಗಳು ಹೊಸದಾಗಿ ಬರೆಯುವವರಿಗೆ ತೋರುಬೆರಳಿನಂತಿದೆ.  ಕೆ ವೈ ಏನ್ ಅವರ ಸೊಗಸಾದ ಪ್ರವೇಶಿಕೆ ಭವ್ಯರನ್ನು, ನಮ್ಮನ್ನು ಕಾವ್ಯದ ಮತ್ತು ಬರೆವಣಿಗೆಯ ದಾರಿಯ ಹಳ್ಳ ದಿಬ್ಬಗಳ ಬಗ್ಗೆ ಎಚ್ಚರಿಸುತ್ತದೆ. ಏನನ್ನು ಕಾಣಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಆರತಿ ಹೆಚ್ ಏನ್ ರವರ ಸಾಲುಗಳು ಸಭ್ಯತೆಯನ್ನು ಮೀರದ ಭವ...

ತೇಜೋ ತುಂಗಭದ್ರಾ

  Tejo-Tungabhadra ಈ ಪುಸ್ತಕವನ್ನ ಎಷ್ಟು ಲೇಟ್ ಆಗಿ ಓದಿದೆಯೆಂದರೆ ಅಷ್ಟರಲ್ಲಿ ಇದು ಹತ್ತಾರು ಮುದ್ರಣ ಕಂಡಿತ್ತು. ಒಂದು ಬಾರಿ ಅರ್ಧ ಓದಿ ಬಿಟ್ಟು ಮತ್ತೆ ಮೊದಲಿನಿಂದ ಪೂರ್ತ ಓದಿದೆ. ವಸುಧೇಂದ್ರರ ಮಿಕ್ಕ ಕಥೆಗಳಲ್ಲಿ, ನೀಲ್ಗತೆಗಳಲ್ಲಿ ಇದ್ದಂತಲ್ಲ ಇಲ್ಲಿಯ ಭಾಷೆ…this was honey dew!  ಬಳ್ಳಾರಿಯ ಬಿಸಿ, ಗಡಸುತನ ಇಲ್ಲಿ ತುಂಗಭದ್ರೆಯಲ್ಲೂ ಇಲ್ಲ, ತೇಜೋದಲ್ಲಂತೂ ಭಾಷೆ ಅತ್ಯಂತ ಮೃದು, ಥೇಟ್ ಬೆಲ್ಲ ಮತ್ತು ಗ್ಯಾಬ್ರಿಯಲ್ನ ನಿಷ್ಕಲ್ಮಶ ಪ್ರೀತಿಯ ಹಾಗೆ.  ಐತಿಹಾಸಿಕ ಫಿಕ್ಷನ್ ಬರೆಯುವಾಗಿನ ತಯಾರಿ ಯಾವ ರೀತಿ ಇರುತ್ತದೆ ಇರಬೇಕು ಎಂಬುದು ನನಗೆ ತಿಳಿದಿಲ್ಲ. ಇದು ಕತ್ತಲಲ್ಲಿ ಕರಿಯಾನೆಯನ್ನು ಕುರುಡರು ಮುಟ್ಟಿದ ಹಾಗೆ ಎಂಬುದು ನನ್ನ ಅನಿಸಿಕೆ. ಇದಕ್ಕೆ ಇಂಬು ಕೊಡುವಂತೆ     ಜಿ ಎಸ್ ಎಸ್ ರವರ “ ಚರಿತ್ರೆ ಎಂದರೆ ಅದೊಂದು ಮಬ್ಬು ಕವಿದ ಸುರಂಗ, ಪಂಜು ಹಿಡಿದು ಒಳ ನಡೆದರೆ ಶತಮಾನಗಳ ನೋವು!” ಎಂಬ ಮಾತುಗಳು ಪುಷ್ಟಿಕೊಡುತ್ತವೆ.  ಇಲ್ಲಿ ವಸುಧೇಂದ್ರರು ಐತಿಹಾಸಿಕ ಗ್ರಂಥಗಳನ್ನ ಮತ್ತು ಅದಕ್ಕಿಂತಾ ಮುಖ್ಯವಾಗಿ ತಮ್ಮ ಇಮ್ಯಾಜಿನೇಶನ್ ಅನ್ನ ಪಂಜಿನಂತೆ ಹಿಡಿದಿದ್ದಾರೆ. ‘ಲೆಂಕತನ’ ಪದ್ಧತಿ ಇಲ್ಲಿ ಬರಿಯ ಆಚರಣೆಯಲ್ಲ ಬದಲಾಗಿ ಇಡೀ ಕಥೆಯ, ಶ್ರೀ ಕೃಷ್ಣದೇವರಾಯರ ವ್ಯಥೆಯ, ಸತ್ತವನ ಚಿತೆಯ ಭಾಗವಾಗಿದೆ. ಹಡಗುಗಳಲ್ಲಿ ಎಂದಿಗೂ ಉಪದ್ರ ಮಾಡುವ ಇಲಿ ಹೆಗ್ಗಣಗಳು ಪಾತ್ರವಾಗಿ, ತಾಪತ್ರಯವಾಗಿ ಕಡೆಗೆ ಬದುಕು ಸಾವಿನ ನ...

ಕವಿರಾಜ್ ಮಾರ್ಗ

ಕವಿರಾಜ್ ಸರ್  ನಿಮ್ಮ ಸಿನಿ ಸಿನಿ ನೆನಪುಗಳ ಗುಚ್ಛವನ್ನ ಪೂರ್ತಿಯಾಗಿ ಓದಿ ಮುಗಿಸಿದಮೇಲೆ ನನಗನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿಬಿಡಬೇಕು ಅನ್ನಿಸಿತು. ಇದು ಪುಸ್ತಕ ವಿಮರ್ಶೆಯಂತೂ ಖಂಡಿತಾ ಅಲ್ಲ…ನೆನಪುಗಳನ್ನು ಎಂತ ವಿಮರ್ಶೆ ಮಾಡುವುದು? ಅವುಗಳನ್ನು ಸವಿಯಬೇಕಷ್ಟೆ. ಎಲ್ಲದಕ್ಕಿಂತ ಮೊದಲಿಗೆ ನನಗೆ ನಿಮ್ಮ ಸರಳತೆ, ನೇರವಂತಿಕೆ ಮತ್ತು ಸ್ಪುಟವಾದ ಭಾಷೆ ಇಷ್ಟವಾಯಿತು. ಕವಿತೆ ಬರೆಯುವ ಹಲವರ ಗದ್ಯ ಯಾಕೋ ಓದಲು ಅಷ್ಟು ಚೇತೋಹಾರಿಯಾಗಿರಲ್ಲ, ಅಥವಾ ಕವಿಗಳಿಗೆ ಸುಧೀರ್ಘವಾಗಿ ಬರೆಯುವ ವ್ಯವಧಾನ ಆಸಕ್ತಿ ಇರುವುದಿಲ್ಲವೇನೋ…ನೀವು ಹಾಗಲ್ಲವೇ ಅಲ್ಲ.  ನಿಮ್ಮ ಒಡನಾಟಕ್ಕೆ ಬಂದವರ, ಕೈ ಹಿಡಿದು ತಂದವರ, ಸಹಾಯಹಸ್ತ ಚಾಚಿದವರ ಬಗ್ಗೆಯೆಲ್ಲಾ ಎಷ್ಟೊಂದು ಅಭಿಮಾನದಿಂದ ಬರೆದಿದ್ದೀರಾ. ಹಾಗೆಯೇ ಸಭ್ಯತೆ ಮೀರಿದ ಆ ಕ್ಯಾತೆ ‘ಪತ್ರಕರ್ತನ’ ಬಗ್ಗೆಯೂ ಎಷ್ಟು ನಿಷ್ಠೂರತೆ ಇಂದ ವ್ಯವಹರಿಸಿದ್ದೀರಿ? ಖುಷಿಯಾಯಿತು. ಬರಹಗಾರ ಅಂದರೇ ನನ್ನ ಅಭಿಪ್ರಾಯದಲ್ಲಿ ಎಲ್ಲರೊಡನಿದ್ದೂ ತನ್ನದೇ ಆದ ಸ್ವಂತಿಕೆ ಮತ್ತು ಅಭಿಪ್ರಾಯ ಹೊಂದಿದವನು. ನಿಮ್ಮ ಹಾಗೆ! ನೀವು ಅಣ್ಣಾವ್ರನ್ನ, ವಿಷ್ಣು ಸಾರ್, ಅಂಬರೀಶ್, ಪುನೀತ್ ಇವರನೆಲ್ಲಾ ಮಾನವೀಯತೆಯ ನೆಲೆಗಟ್ಟಿನಲ್ಲಿ ನೋಡಿರುವುದು ಅವರ ಚಿತ್ರಗಳಿಗೆ ಒಳ್ಳೊಳ್ಳೆಯ ಹಾಡುಗಳನ್ನ ಬರೆದರೂ ಯಾವುದನ್ನೂ “taken for granted” ಮಾಡಿಕೊಳ್ಳದೇ ಇರುವುದು ಅದರಲ್ಲೂ ಇಂದಿನ “entitlement” ಜಗತ್ತಿನಲ್ಲಿ ಸ್ವಲ್ಪ ಅಪರೂಪ. ಇಷ್ಟೇ ಅಲ...

Kaaju biscuit!

  #  ಕಾಜು ಬಿಸ್ಕೆಟ್ # ಕಿರಣ್ ನಿಮ್ಮ ಕಥಾ ಸಂಕಲನದ ಮೂಲ ದ್ರವ ಹುಡುಕಾಟ ತಾನೇ ? ಬಹುಷ ನಿಮ್ಮ ಬದುಕಿನ ಹುಡುಕಾಟವೇ ಇಲ್ಲಿ ನವಿರಾದ ಕಥೆಗಳಾಗಿ ಹೊಮ್ಮಿರಬೇಕು ಅಲ್ಲವೇ? ನಿಮ್ಮ ಕಥೆಗಳ ವಸ್ತುವಿನ ಅದನ್ನು ಪ್ರಸ್ತುತಪಡಿಸುವ ಹಾದಿಯಲ್ಲೆಲ್ಲಾ ನನಗೆ ಹೊರಗಿನಿಂದ ನಿಂತು ಕಥೆ ಹೇಳುವ ಅದರ ಮೂಲಕ ಕಥೆಗಳನ್ನ “ to let it be ” ಆಗಿಸುವ ನಿಮ್ಮ ಜಾಣ್ಮೆ ಅಥವಾ ವ್ಯಕ್ತಿತ್ವ ಕಾಣಿಸುತ್ತದೆ. ನಿಮ್ಮ ಆಸುಪಾಸು ಬಂದರೆ ನಾವೂ ಕಥೆಯಾಗುತ್ತೇವೆನೋ ಎನ್ನಿಸುವಷ್ಟು ಸರಳ ಮತ್ತು ಸೂಕ್ಷ್ಮ ಕಥೆಗಳು ನಿಮ್ಮವು.  ಕಥೆಗಾರನಿಗೆ ತನ್ನ ಮತ್ತು ಸುತ್ತಮುತ್ತಲಿನ ಬದುಕಿನಲ್ಲೇ ವಸ್ತುಗಳು ಸಿಕ್ಕರೂ ಅದರ ಜಿಜ್ಞಾಸೆ ಮಾತ್ರ ಅವನಿಗೇ ಸ್ವಂತದ್ದು. ಅದು ಕಥೆಗಳಿಗೆ ಸಕಾರಣವಾಗಿ ದಕ್ಕಿದರೆ ಅದು ಕಥೆಯ ಓದುಗರ ಪುಣ್ಯ, ಅದು “ಇಲ್ಲಿ ದಾವಣಗೆರೆಯವರು ಇದ್ದಾರ? , 21 ನೇ ಕ್ರೋಮೋಸೋಮು, ಕೊಲೆ, ಅಪ್ಪ ಸೈಕಲ್ ಕಲಿಸಲಿಲ್ಲ “ ಕಥೆಗಳಲ್ಲಿ ವ್ಯಕ್ತವಾದರೆ……ಸಮಾಜದ ಮೇಲಿನ ಒಂದಷ್ಟು ಅಸಹನೆ “ಪ್ರತಿಮೆ, ಕಾಣೆಯಾದವರು, ಕಾಜು ಬಿಸ್ಕೇಟ್, ಶ್ರೀಧರ ನನಗೆ ಚೆನ್ನಾಗಿ ಗೊತ್ತು” ಕಥೆಗಳಲ್ಲಿ ವ್ಯಕ್ತವಾಗಿದೆ. ಅದರ ಜೊತೆಗೇ ಬೇರೆಯವರ ಚರ್ಮ, ದೇಹ ಮನಸಿನಲ್ಲಿ ಹೊಕ್ಕು ಅರಿವ ವಿಷಯಗಳು “ ಪರಕೀಯ, ಒಂದು ಮಧ್ಯಾಹ್ನ, ಎಂಟನೆಯ ದಿನ, ಅವರು ಮತ್ತೆ ಬರುತ್ತಾರೆ” ಎಂಬ ಕಥೆಯಲ್ಲಿ ಸಂಭವಿಸಿದೆ. ಒಟ್ಟಿನಲ್ಲಿ ಸ್ವಂತದ್ದು, ಅನುಭವಕ್ಕೆ ಬಂದಿದ್ದು, ಜಿಜ್ಞಾಸೆಗೆ ಏಟುಕಿದ್ದು/ ಏಟುಕದಿದ...

The healer’s journey

The healer’s journey - Dr. K B Suryakumar  Venus circus fire issue in Srirampura,  Gangarams building collapse near current city center,  Tannery road arrack tragedy (ಕಳ್ಳ ಬಟ್ಟಿ ಸಾರಾಯಿ) leading to thousands of deaths in 1980s has one thing in common - Dr K B Suryakumar was the forensic expert in all these cases.  Dr Suryakumar uncle was also the personal physician to Field Marshal K M Cariappa, and his close proximity to the great soldier is well articulated in this book !  Being the foremost forensic expert in the government of Karnataka, he served in Coorg, Bangalore, Mangalore etc doing both forensic and regular practice for 4 decades and this book is a culmination of all his experiences where he upheld the ethics of his profession with a touch of humility!  He is not just a care giver, healer, doctor, forensic expert but a great human being and an amazing storyteller too. He was also my aunt Manjula Devi s classmate and classmate of Girijamma, the most ...

Apple in china

  How apple built modern China 🇨🇳  #################################### Probably the most important book of the century ! Because what america 🇺🇸 din’t wanted Apple did quietly in the name of low cost, globalisation, outsourcing and profits !  - How Apple built Chinese tech sector by investing , training, transferring technology to China via Foxconn and other American companies and individuals !  - How they trained 28 million ( 2.8 crore) Chinese on advanced electronics manufacturing, precision circuit boards, built factories, established logistics  - How they invested 55 billion dollars every year starting 2015 on training and development to make low cost iPhones for the world and maximum profit for USA. Contrary to US investment of 52 billion over 4 years for chip manufacturing in America by Biden and 202 billion USD by Foxconn in China in 20 years !  - How Apple extracted from Chinese low cost, low regulatory, low human rights oriented economy. ...

The coffee king

  Where did all the money go ??? To understand business one needs to either do business or understand business debacles ! My attempt is the later one.  Yes ! Siddartha, the man was the darling of startups, investors, IT entrepreneurs via his investments in Infosys, mindtree, bagmane tech park, kshema tech, thousands of acres of coffee estates, and his flagship cafe coffee day, popularly known as CCD. For those of us who were in college in early 2000s Bangalore, CCD was a thing ! As they said “ A lot can happen over a cup of coffee” ☕️ A lot really did eventually…. Notwithstanding the thousands of jobs the man created.  My interest in the above businesses grew as Mindtree happened behind our college in global tech park, one of the early CCDs opened in RV college of engineering in 2002 etc. Probably Mr.Siddartha’s used his social capital way too much in convincing, borrowing, cross borrowing, investing through shady transactions and many such transactions!  No one knew...

AMRUTH - The great churn

  India doesn’t create world class brands on a regular basis and whenever we do seldom they endure the test of time.  In the modern times Amruth single malt 🥃, Amruth Fusion, Amruth Peated, Greedy Angels are such brands which came amongst the top single malted whiskeys in the world whiskey bible consistently over the past decade.  This is a homegrown (Bengaluru) brand from the Jagdale group, Mysore Road which even made headlines in the Scotland 🏴󠁧󠁢󠁳󠁣󠁴󠁿 yard and came out with flying colors. How cool is to to take whiskey to Scotland??? Shriram devata traces this journey from early generations of the group, their taste for the craft, tenacity in blending, perseverance, and passion and determination to create a world class brand which now is famous across USA, Cannada, UK and ofcourse India 🇮🇳.  The story is told through lives of employees who matter the most after all the rain and shine.  A truly incredible book for whiskey connoisseurs, brand managers, ...

Bengaluru by Jogi

  ಬೆಂಗಳೂರು by JOGI ……. ಜೋಗಿಯವರ ಪುಸ್ತಕಗಳನ್ನು ನಾನು ವರ್ಷಕ್ಕೆ ಒಂದಾದರೂ ಓದುತ್ತೇನೆ.  ಅವರ ಬರವಣಿಗೆ ಕಾಂಟೆಂಪರರಿಯಾಗಿಯೂ, ಸರಳವಾಗಿಯೂ ಮತ್ತು ಅಲ್ಲಲ್ಲಿ ವಿಕ್ಷಿಪ್ತವಾಗಿಯೂ ಇರುತ್ತವೆ. ಅಂದಕಾಲತ್ತಿಲ್ ಅವರ ಜೋಗಿ ಕಾಲಂ ಓದಿ ಓದಿ ಬೆಳೆದವರಾದ ನಮಗೆ, ಇವರು ಇಷ್ಟು ಸರಳವಾಗಿ ಕಥೆ ಕಾದಂಬರಿ ಬರೆಯಬಲ್ಲರ, ಎಂದು ಅಚ್ಚರಿಯಾಗುವುದು ಖಚಿತ!  ಅವರು ಬೆಂಗಳೂರಿನ ಬಗ್ಗೆ ಬರೆದಿರುವ ಬಹುಪಾಲು ಪುಸ್ತಕಗಳನ್ನು ನಾನು ಓದಿದ್ದೇನೆ ಮತ್ತು ಮೇಲೆ ಹೇಳಿದ ಎಲ್ಲ ಮಾತುಗಳೂ ಈ ಬರವಣಿಗೆಗೆ ಹೆಚ್ಚು ಸೂಕ್ತ ಎಂದು ಯಾವಾಗಲೂ ನನಗೆ ಅನಿಸುತ್ತದೆ. ಆದರೂ ಅವರ ಮಹಾನಗರಗಳ ಬಗೆಗಿನ ಕೆಲವು ಅಭಿಪ್ರಾಯಗಳಿಗೆ ನನ್ನ ತಕರಾರಿದೆ !  ಸದರಿ ಕೃತಿ “ ಬೆಂಗಳೂರು “ ಓದಿದ ಮೇಲೆ ಒಂಥರಾ “ಅಸಂಗತ” ಅನ್ನಿಸುವಂಥ ಭಾವ ಮೂಡಿತು.  ಆದರೆ the stranger ನ ಥರಹ ಅಲ್ಲ.  ಅಲ್ಲಿ ಕಮೂನ ನಾಯಕ ಮಾಡುವ ಕ್ರಿಯೆಗೆ ಕಾರಣವೇ ಇಲ್ಲ, ಅದು ಯಾಕಿಲ್ಲ ಅಂತ ಅವನಿಗೇ ಅನುಮಾನ ! ಆದರೆ ಇಲ್ಲಿ ಎಲ್ಲದಕ್ಕೂ ಕಾರಣ ಇದೆ ಅಥವಾ “ ಕಥಾನಾಯಕ” ಹಾಗೆ ನಂಬಿದ್ದಾನೆ, ವಿಶೇಷ ಅಂದರೆ ಆ ಕಾರಣ ದಶಕಗಳ ಕಾಲ ಕಾವು ಉಳಿಸಿಕೊಂಡಿದೆ. ಆದರದಕ್ಕೆ ಯಾರೋ ಬಲಿಯಾಗಿದ್ದಾರೆ ಕಾರಣವಿಲ್ಲದೇ, ಅದಕ್ಕೆ ಅಸಂಗತ ಭಾವ ಅಂದಿದ್ದು.  ಇಲ್ಲಿ ಬರುವ ಪಾತ್ರಗಳಾದ ಮಂಗಳಾ ಮೂರ್ತಿ ಬೆಂಗಳೂರನ್ನ ರೆಪ್ರೆಸೆಂಟ್ ಮಾಡ್ತಾಳೆ, ಒಂದು ಸೆಳೆತದಂತೆ , ಸರೋಜಿನಿ conscience ಅನ್ನ, ನಾಗರಾಜ ...

The last sanctuary in Aleppo

  This is the story of an electrician in Aleppo Syria who also accidentally happens to be an ambulance driver due to necessity of the war in Syria 🇸🇾. With Russian bombers constantly creating the havoc in the historical city of Aleppo which is also a strategic foothold from east to west. The Assad regimes use of chemical weapons on its own people ( chlorine and phosphorus bombs) is the lowest any regime can stoop on its own subjects.  Even in such a condition Ali volunteers for the ambulance job working with few NGO s rescuing people. In this quest he losses a lot of people close to him and carries them in his own ambulance 🚑. His wife leaves him taking their children at the peak of the war seeking asylum in turkey, Ali doesn’t join her despite her weeping requests.  This is a story about Ali who in the midst of war outside and inside plans with to open a sanctuary for cats 🐈, dogs with his own money. Eventually with the help of various Facebook and instagram friends ...

A perfect day to be alone

  If you like a slow paced, laid back but enchanting read just for your mind and soul, this Japanese novel is a right kind. The core plot is “ not much happens in the life of the female protagonist” however when something does, as people around her say “ she overthinks things!”.  Nowadays many Japanese and Korean novels are going back to basics - by which I mean exploring boredom, loneliness, not to overcome them but to accept them and live with it, like the good old days !
 “ಕಾರಂತರ ಸುಳಿಯಲ್ಲಿ”  ################################## ಕಾರಂತರು ತೀರಿದಾಗ ನನಗೆ 12 ವರ್ಷ.  ಈ ವಾರ್ತೆಯನ್ನು ತುಮಕೂರಿನ ನಮ್ಮ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹೇಳಿ “ ಕಡಲ ತೀರದ ಭಾರ್ಗವ” ಅಸ್ತಂಗತನಾದ ಎಂದು ನಮ್ಮ ಕನ್ನಡ ಮೇಷ್ಟ್ರು ಹೇಳಿದ್ದು ಈಗಲೂ ನೆನಪಿದೆ.  ಅವರ ಯಕ್ಷಗಾನ ಹೇಳಿಕೊಡುವ, ನೃತ್ಯಮಾಡುವ ದೃಶ್ಯಗಳನ್ನು DD ಚಂದನದಲ್ಲಿ ನೋಡಿದ್ದು ಜ್ಞಾಪಕವಿದೆ. ಅವರ ಬರವಣಿಗೆಯ ಕೆಲವು ಪಾಠಗಳು ನಮಗೆ ಹೈ ಸ್ಕೂಲಿನಲ್ಲಿ ಇದ್ದುದ್ದು ಅದು ಮುಗಿದಮೇಲೆ “ಕವಿ ಕೃತಿ ವಿಚಾರದಲ್ಲಿ” ಅವರ ಬಗ್ಗೆ ಒಂದು ಪ್ಯಾರಾ ಓದಿದ್ದು ಕೂಡಾ ಸ್ಪಷ್ಟ ನೆನಪು.  ಇಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ ಗೆಳೆಯ Karthik Herle ಕೋಟದಲ್ಲಿ (ಸಾಲಿಗ್ರಾಮ) ಬೆಳಗಿನ-ಸಂಜೆಯ ವಾಕಿಂಗ್ ಮಾಡುತ್ತಾ ಶಾಲೆಗೆ ಹೋಗುತ್ತಿದ್ದ ನಮ್ಮನ್ನು ಕಾರಂತರು ಕುಶಾಲಿಗೆ ಮಾತನಾಡಿಸುತ್ತಿದ್ದರು ಎಂದು ಹೇಳಿದಾಗ ಅವನ ಮೇಲೆ ಹೊಟ್ಟೆ ಉರಿ ಬಂದಿತ್ತು 🙂 ಕಾರಂತರು ಏನೆಲ್ಲ ಮಾಡಿದರು! ಬರವಣಿಗೆ, ಸಿನಿಮಾ, ಪ್ರೆಸ್, ನೃತ್ಯ, ಸಿನಿಮಾ, ಫೋಟೋಗ್ರಫಿ, ವಿಜ್ಞಾನ ವಿಶ್ವಕೋಶ, ತಿರುಗಾಟ, ಯಕ್ಷಗಾನ ಬಯಲಾಟ, ಸಂಸ್ಕೃತಿ ಉತ್ಸವಗಳು, ಭಾಷಣ, ಚುನಾವಣೆ, ಹೋರಾಟ ಅಬ್ಬಬ್ಬಾ!  ಸ್ವತಃ ರಾಷ್ಟ್ರಕವಿ GSS, ಕಾರಂತರ “ಬಾಲ ಪ್ರಪಂಚ” ನನ್ನ ಬಾಲ್ಯದ ಸಮೃದ್ಧ ಓದಿನ ನೆನಪಿನ ಬುತ್ತಿ ಎಂದಿದ್ದರು.  ಅಂತಹಾ ಕಾರಂತರ ಬಗ್ಗೆ ಅವರ ಮಕ್ಕಳು ಬರೆದ “growing up ka...

ನಿಲ್ಲು ನಿಲ್ಲೇ ಪತಂಗ

  ಮಂದಣ್ಣನನ್ನ ನೆನೆದಾಗಲೆಲ್ಲಾ ನನಗೆ ನಮ್ಮಪ್ಪನೇ ನೆನಪಾಗುತ್ತಾರೆ. ಅದನ್ನು ವಿಸ್ತೃತವಾಗಿ ನನ್ನ “ ಅಪ್ಪನ rallys ಸೈಕಲ್ “ ಪ್ರಬಂಧಗಳಲ್ಲಿ ಬರೆದ್ದಿದ್ದೇನೆ. ಆದರೆ ತೇಜಸ್ವಿಯವರ “ಕರ್ವಾಲೋ” ದ ಮಂದಣ್ಣ ಆ ಪುಸ್ತಕದ/ ಕಾದಂಬರಿಯ/ ವಸ್ತುವಿನ/ ಅಲ್ಲೋಚನೆಯ ಹೈಲೈಟ್!  ಮಂದಣ್ಣನನ್ನ ಗಮನಿಸಿದ ಕನ್ನಡದ ಓದುಗ ಅಂತಹಾ ಹಲವು ಮಂದಣ್ಣರನ್ನ ನಿಜ ಜೀವನದಲ್ಲಿ ಗೌರವಿಸಿದ್ದಾರೆ. ಇದು ತೇಜಸ್ವಿಯವರ ಮೂಲ ಆಶಯಕ್ಕೆ ಸಿಕ್ಕುತ್ತಿರುವ ಜಯ. ಇಂತಹಾ ಕರ್ವಾಲೋ, ಮಂದಣ್ಣ, ಹಾರೋತಿಯ, ಕಾಡಿನ ಬೆರಗಿನ ಮುಂದುವರಿದ ಭಾಗವೇ “ ನಿಲ್ಲು ನಿಲ್ಲೇ ಪತಂಗ “. ಇಲ್ಲಿ ಪ್ರೊಫೆಸರ್, ಅವರ side kick ಹರೀಶ್ ಖೇರಾ, ಮಂದಣ್ಣ ಮತ್ತವನ ಮೊಮ್ಮಗ, ಪತಂಗ ಮತ್ತದರ ಮಡಗಾಸ್ಕರ್ ಕನೆಕ್ಷನ್, ಕಾಡಿನ ನಿಘೂಡತೆ, ಮೆದರಹಳ್ಳಿಯಂತಹದ್ದೇ ಮತ್ತೊಂದು ಅವಸಾನ ಗೊಂಡ ಹಳ್ಳಿ, ತಲೆ ಬುರುಡೆ ಕೇಸು ಮತ್ತು ಕರ್ವಾಲೋ, ಸ್ವತಃ ತೇಜಸ್ವಿಯವರ ಒಡನಾಟದ ನೆನಪುಗಳು (ಸೃಷ್ಟಿ) ನಮ್ಮನ್ನು ಮುದಗೊಳಿಸುತ್ತವೆ.  ಜನಪ್ರಿಯ ಕಾದಂಬರಿಯ, ಪಾತ್ರಗಳನ್ನು ಅದೇ ಲೇಖಕ ಮುಂದುವರಿಸುವುದು ಒಂದು ರೀತಿ ಆದರೆ ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಅಂತಹುದ್ದೇ ಕಾದಂಬರಿಯನ್ನ ಬೋಲ್ಡ್ ಆಗಿ ಮರುಸೃಷ್ಟಿ ಮಾಡಿ ಅದಕ್ಕೆ ಹೊಸದೊಂದು ಕಥೆ ಹೆಣೆದು, ಕಾಡಿನ ಬೆರಗನ್ನು, ಪ್ರಕೃತಿಯ ಅನೂಹ್ಯತೆಯನ್ನು ಹಾಗೆಯೇ ಅದೆಲ್ಲದರ ಬಗ್ಗೆ ಮನುಷ್ಯನ ಆಸಕ್ತಿಯನ್ನು ಹೆಣೆದು ಕುತೂಹಲವಾದ ಕಥೆಯೊಂದನ್ನು ಚೆನ್ನಾಗಿ ನಿರೂಪ...

The remains of the day

  If there is one book in English you want to read for this year then “Remains of the day” by kazuo Ishiguro must be it. This is a masterclass in restrained writing where power of unsaid is more powerful than what is actually said or expressed.  The film espouses values like dignity, professionalism, etiquette, restraint, emotional control, service, introspection, care, missed opportunities, love as an undercurrent, regret vs virtue, making amends with life ultimately.  It’s slow, controlled, consistent narration from a dignified English butler Stevens who served Lord Darlington in his mansion during the first and Second World War overlooking high profile visits from who’s who of Britain, America, France and German nazis ….an interesting but matured love story which brews along is as good as it can get !

By the river piedra I sat down and wept

  The mark of a genius Paulho Coelo mixes philosophy, love, religion, faith, myth and miracle ! A master of his craft and an enigma of a writer !

ನಾ ಕಂಡಂತೆ ತೇಜಸ್ವಿ ಶಾಮಣ್ಣ

ಸಮಾನತೆ ಮತ್ತು ಸರಳತೆಯನ್ನು ಪ್ರತಿಪಾದಿಸುವ ಎರೆಡು ಜೀವಗಳ ಬಗೆಗಿನ ಈ ಪುಸ್ತಕ ನನ್ನನ್ನು ಬಹಳವಾಗಿ ಪ್ರಭಾವಿಸಿತು. ತೇಜಸ್ವಿ ಮತ್ತು ಶಾಮಣ್ಣರ ಸ್ನೇಹ, ಸಾಮಾಜಿಕ ಕಳಕಳಿ, ಬದ್ಧತೆ, ತೊಳಲಾಟ ತಿಕ್ಕಾಟಗಳು, ಮೀನು ಹಿಡಿಯುವುದು, ಪ್ರೆಸ್ ನೆಡೆಸುವುದು, ಸಂಗೀತ ಕಲಿಕೆ, ಕೃಷಿಯ ಪ್ರಯತ್ನಗಳು, ರೈತ ಸಂಘ, ರಾಜಕಾರಣ, ತಮ್ಮವರೊಡನೆ ಒಡನಾಟ, ಕೌಟುಂಬಿಕ ಪ್ರೀತಿ ಎಲ್ಲವೂ ಅನುಕರಣೀಯ.  ಅಣ್ಣನ ನೆನಪು, ನನ್ನ ತೇಜಸ್ವಿ, ತೇಜಸ್ವಿ ಪ್ರಸಂಗಗಳು ಮುಂತಾದ ಪುಸ್ತಕಗಳಲ್ಲಿ ಇರದ ಎಷ್ಟೋ ವಿಷಯಗಳು  ಮುಖ್ಯವಾಗಿ ತೇಜಸ್ವಿಯವರ ಬಾಲ್ಯದ ಬಗ್ಗೆ ಈ ಪುಸ್ತಕದಲ್ಲಿ ದಾಖಲಾಗಿವೆ. ಈ ಪುಸ್ತಕದಲ್ಲಿ ಕಡಿದಾಳು ಪ್ರಕಾಶ್ ರವರು ಅವರಿಬ್ಬರ ಬಗ್ಗೆಯಷ್ಟೇ ಅಲ್ಲದೆ ಐವತ್ತು ಅರವತ್ತು ವರ್ಷಗಳ ಇಡೀ ಮಲೆನಾಡಿನ ಸ್ಥೂಲ ಚಿತ್ರಣವನ್ನೇ ಕೊಟ್ಟಿದ್ದಾರೆ. ಎಷ್ಟೋ ಮುಖ್ಯವಾದ ವಿಷಯಗಳು ಇಲ್ಲಿ ದಾಖಲಾಗಿವೆ. ಅವುಗಳಲ್ಲಿ ಕುವೆಂಪು ಪ್ರತಿಷ್ಠಾನದ ಕಾರ್ಯ ಅದಕ್ಕೆ ಸಹಾಯ ಮಾಡಿದವರು, ಅದರ ಏಳು ಬೀಳು ಮುಂತಾದವುಗಳು ಮಹತ್ತರವಾದುವು.   ಇದು ಸರಳವಾಗಿ ಓದಿಸಿಕೊಂಡು ಹೋಗುವ ಮಹತ್ತರವಾದ ಪುಸ್ತಕ.

ಕೃಪಾಕರ ಸೇನಾನಿ ಮತ್ತು ವೀರಪ್ಪನ್

  ಕೃಪಾಕರ ಮತ್ತು ಸೇನಾನಿ ಇವರು ಅಣ್ಣ ತಮ್ಮ ಅಂತಲೇ ಇದ್ದೆ. ಆದರದು ಅದ್ದಕಿಂತಲೂ ಮೀರಿದ ಸ್ನೇಹ. ಕೆನ್ನಾಯಿಯ ಜಾಡು ಹಿಡಿದು, ಗುಡ್ಡ ಬೆಟ್ಟ ಹತ್ತಿಳಿದು, ಹಕ್ಕಿ ಪಿಕ್ಕರಂತೆ, ಪರದೇಶಿಗಳಂತೆ, ಜ್ಞಾನಿಗಳಂತೆ, ಸಮಾಜವಾದಿಗಳಂತೆ, ವೈಚಾರಿಕರಂತೆ, ಸಾಮಾನ್ಯ ಹಳ್ಳಿಗರಂತೆ, ಕಾಡು ಮನುಷ್ಯರಂತೆ, ಹುಟ್ಟಾ ತರಲೆ ಮಾಡುವ ಪುಟ್ಟ ಮಕ್ಕಳಂತೆ, ದಾರ್ಶನಿಕರಂತೆ, ಬಂದದ್ದನ್ನು ಬಂದಂತೆ, ಇದ್ದದ್ದನ್ನು ಇದ್ದಂತೆ ಸ್ವೀಕರಿಸಿಬಿಡುವ ಇವರು ಒಮ್ಮೆ ೧೪ ದಿನ ನಟಹಂತಕ ವೀರಪ್ಪನ ತೆಕ್ಕೆಗೆ ಸಿಕ್ಕಿ ಅನುಭವಿಸಿದ ಪರಿಪಾಟಲು ಈ ಪುಸ್ತಕದ ಮೂಲ ದ್ರವ್ಯ.  ವೀರಪ್ಪನಿಗೆ ನಾಡಿನ ಸೂಕ್ಷ್ಮಗಳನ್ನು ತಿಳಿಸುತ್ತಾ ಅವನಿಂದ ಕಾಡಿನ ಸೂಕ್ಷ್ಮಗಳನ್ನು ಅರಿಯುತ್ತಾ, ಅವನ ತಂಡದೊಡನೆ ಹಾಗೂ ಹೀಗೂ ಜಗಳಕ್ಕೆ ಇಳಿಯುತ್ತಾ ಅವರು ಕೊಟ್ಕದ್ದನ್ನು ತಿನ್ನುತಾ, ತಮಾಷೆ ಮಾಡುತ್ತಾ, ಮಾಡಿಕೊಳ್ಳುತ್ತಾ ಸಾಗುವ ಅವರ ಹದಿನಾಲ್ಕು ದಿನಗಳು uneventful ಆಗಿ ಮಾತ್ರ ಇರಲಿಲ್ಲ ಅನ್ನಿಸುತ್ತದೆ.  ವೀರಪ್ಪನ ಕಾಡು ಪ್ರಾಣಿಗಳ instinct, ಸಂಗೀತ ಪ್ರಜ್ಞೆ, ಶರಣಾಗತಿಯ ಆಕಾಂಕ್ಷೆ, ಕಾಡು ನ್ಯಾಯಗಳ ಮೂಲಕ್ಕೆ ಈ ಪುಸ್ತಕ ಹೋಗುವುದಲ್ಲದೆ ಆ ನಂತರದ ದಿನಗಳಲ್ಲಿ ಆತ ಎಸಗಿದ ಮಹಾಪರಾಧಗಳ ಮೂಲದ ಬಗ್ಗೆಯೂ ಇದು ಸೂಕ್ಷ್ಮವಾಗಿ ತಿಳಿಸುತ್ತದೆ. ಕಡೆಗೂ ಆತ ನೂರಕ್ಕೂ ಹೆಚ್ಚು ಮನುಷ್ಯರನ್ನ ಕೊಂದ ನರಹಂತಕ ಎಂಬುದನ್ನ ದಾಟಿಸಲು ಮರೆಯುವುದಿಲ್ಲ ಕೃಪಾಕರ- ಸೇನಾನಿ ಯವರ ಈ ಪುಸ್ತಕ!

B capital (ಕ್ಯಾಪಿಟಲ್)

  ಮಹಾನಗರ ಒಂದರ ಚಹರೆಗಳು, ಒಳಸುಳಿಗಳು, ಧರ್ಮ ಕರ್ಮ ಮರ್ಮಗಳು ಹಲವು ಬಗೆಯವು. ಒಬ್ಬರಿಗೆ, ಒಂದು ಪುಸ್ತಕಕ್ಕೆ ಇದು ನಿಲುಕುವುದೂ ಇಲ್ಲ, ಹಾಗೆ ನಿಲುಕಿಬಿಟ್ಟರೆ ಅದು ಮಹಾನಗರವೂ ಅಲ್ಲ. ಇಷ್ಟಂದಮಾತ್ರಕ್ಕೆ ಅದು ಅತೀತವೂ ಅಲ್ಲ. ಅಂತಹ ಮಹಾನಗರ, ಅದರಲ್ಲೂ ಬೆಂಗಳೂರು, ಕಳೆದ ಕೆಲವು ದಶಕಗಳಲ್ಲಿ ಜಾಗತಿಕ ಮುನ್ನೆಲೆಗೆ ಬಂದ ಕಾರಣ it is still developing….ನೆಗೆಟಿವ್ ಆಧರಿಸಿದ ಫೋಟೋದ ಹಾಗೆ.  ಜೋಗಿಯವರ ಹಿಡಿ ಪ್ರಯತ್ನ, ಈ ಪುಸ್ತಕದ ಮತ್ತು ಇತರೆ ಬೆಂಗಳೂರ್ ಸೀರೀಸ್ನ ಪುಸ್ತಕಗಳ ಮೂಲಕ ಆ ಮೃಗಜಲವನ್ನ ಹಿಡಿಯುವುದೇನೋ ಎಂದು ನನಗೆ ಆಗಾಗ ಅನಿಸಿದೆ.  B ಕ್ಯಾಪಿಟಲ್ ಪುಸ್ತಕವನ್ನ ಗಿರೀಶ್ ಕಾರ್ನಾಡರು ಬ್ಯಾಲೆ ಮಾಡುವ ಆಸೆ ವ್ಯಕ್ತಪಡಿಸಿದ್ದರ ಅರ್ಥ ಈ ಪುಸ್ತಕ ಓದಿದಮೇಲೆ ನನಗೆ ಸ್ವಲ್ಪಮಟ್ಟಿಗೆ ತಿಳಿಯಿತು.  ಇಲ್ಲಿ ಒಂದಷ್ಟು ವಿಷಯಗಳು ಕಾವ್ಯಾತ್ಮಕವಾಗಿ, ಮನುಷ್ಯ ಸಂಬಂಧಗಳು ಸಂಕೀರ್ಣವಾಗಿ, ಶಹರ ನದಿಯಾಗಿ, ಅದರೊಳಗಿನ ಸುಳಿಯಾಗಿ, ಸ್ನೇಹಿತನಾಗಿ, ಪರಿಚಯವೇ ಇರದ ಅನಾಮಿಕನಾಗಿ ಕಾಣಿಸುತ್ತದೆ. ಇದೆಲ್ಲ ಇದ್ದರೂ ಇಲ್ಲಿ ಇದು ನಮಗೆ ಅಪರಿಚಿತವೇ ಆಗಿ ಉಳಿಯುವುದು ಅದರ ತನವೋ ಅಥವಾ ಅದು ನಮ್ಮ ಬಲಹೀನತೆಯೋ ಗೊತ್ತಿಲ್ಲ. ನನಗೆ ನಮ್ಮೂರು ತುಮಕೂರಿನ ಪೇಟೆಯಲ್ಲಿನ ಬಾಲ್ಯದ ನೆನಪು ಮತ್ತದರ ಪರಿಚಯವಿರುವುದರಿಂದ ಅಲ್ಲಿ ನನ್ನ ಗೆಳೆಯರ (ಮೊದಲ) ಬಳಗವಿರುವುದರಿಂದಲೂ, ನನಗೆ ಎಲ್ಲಿ ಹೋದರೂ ತುಮಕೂರಿನ ಹ್ಯಾಂಗೊವರ್ ಬಿಡುವುದಿಲ್ಲ. ಆದ್ದರಿಂ...

Why Nations Fail

  Nobel prize in economics 2024 - Daron acemoglu, Simon Johnson and James A Robinson !  ಇತ್ತೇಚೆಗೆ ನಾನು ಓದಿದ “ why nations fail “ by Darren acemoglu and Tim Robinson ಪುಸ್ತಕದ ಕೆಲವು ಮುಖ್ಯ ಅಂಶಗಳು ಇಲ್ಲಿವೆ ….ಅವರಿಗೆ ಈ ಬಾರಿಯ ನೊಬೆಲ್ ಪಾರಿತೋಷಕ ಬಂದಿದೆ  1) Why some countries with less resources do well relative to some with abundance …. Japan, Australia vs some African countries  - political structure  - Financial institutions  - economic structure  - Technology & application  - People’s attitude and motivation  - corruption  Rise of South Korea, Singapore, china in the last 50 years  2) Economy depends on standards of living  - clean water, Roads, sanitation, voting rights, health and education, democracy and freedom, access to financial system, political opportunities  3) History shapes political knowledge  - bubonic plagues and death of 250 million making workforce important and in demand - Statute of labourers (1351) deman...

Jogi letters to his daughter

  ಡಿಯರ್ ಜೋಗಿ ಸರ್  ನೀವು ಮಗಳಿಗೆ ಬರೆದ ಪತ್ರಗಳನ್ನ ಓದಿದೆ. ಈ ಪುಸ್ತಕದ ಮೂಲ ಆಶಯ ಸ್ವಾತಂತ್ರ್ಯ ಅನ್ನಿಸಿತು. ವಿದೇಶ- ನಮ್ಮ ದೇಶ ಇದೆಲ್ಲದುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಾನು ಒಪ್ಪುತ್ತೇನೆ. ಈ ಪುಸ್ತಕ ನಿಮ್ಮ ಯಾವತ್ತಿನ ಪುಸ್ತಕಗಳಂತೆ ಓದಲಿಕ್ಕೆ ಲೈಟ್ ಆಗಿಯೂ ತಿಳಿದುಕೊಳ್ಳಲಿಕ್ಕೆ ಘನವಾಗಿಯೂ ಇದೆ. ಇದು ನಿಮ್ಮ ಮಗಳಿಗೆ ಎಂಬುದು ನೆಪ ಅಥವಾ ಕಾರಣ ಅಷ್ಟೇ. ನಾನಿದನ್ನು ಆಗಾಗ ಓದಿಕೊಳ್ಳಬೇಕು ಅನ್ನಿಸಿದೆ.  Cheers 🍻

The Vegetarian by Han Kang

  Terrifying, Absurd, cold, artistic, psychotic, nerve wrecking, slow burner, bizarre, genius narration, back and forth story telling, insensitive, overly sensitive, lightness of behavior, heaviness of being, few characters, realization in reverse, least magical & unreal but still convincing, slow read, fast paced, story oriented, metaphorical, multiple narration style by multiple characters/people, metamorphosis of protagonist, dream to reality to dream, pity, realization, acceptance, rebellion …..much much more.