ಕೃಪಾಕರ ಮತ್ತು ಸೇನಾನಿ ಇವರು ಅಣ್ಣ ತಮ್ಮ ಅಂತಲೇ ಇದ್ದೆ. ಆದರದು ಅದ್ದಕಿಂತಲೂ ಮೀರಿದ ಸ್ನೇಹ. ಕೆನ್ನಾಯಿಯ ಜಾಡು ಹಿಡಿದು, ಗುಡ್ಡ ಬೆಟ್ಟ ಹತ್ತಿಳಿದು, ಹಕ್ಕಿ ಪಿಕ್ಕರಂತೆ, ಪರದೇಶಿಗಳಂತೆ, ಜ್ಞಾನಿಗಳಂತೆ, ಸಮಾಜವಾದಿಗಳಂತೆ, ವೈಚಾರಿಕರಂತೆ, ಸಾಮಾನ್ಯ ಹಳ್ಳಿಗರಂತೆ, ಕಾಡು ಮನುಷ್ಯರಂತೆ, ಹುಟ್ಟಾ ತರಲೆ ಮಾಡುವ ಪುಟ್ಟ ಮಕ್ಕಳಂತೆ, ದಾರ್ಶನಿಕರಂತೆ, ಬಂದದ್ದನ್ನು ಬಂದಂತೆ, ಇದ್ದದ್ದನ್ನು ಇದ್ದಂತೆ ಸ್ವೀಕರಿಸಿಬಿಡುವ ಇವರು ಒಮ್ಮೆ ೧೪ ದಿನ ನಟಹಂತಕ ವೀರಪ್ಪನ ತೆಕ್ಕೆಗೆ ಸಿಕ್ಕಿ ಅನುಭವಿಸಿದ ಪರಿಪಾಟಲು ಈ ಪುಸ್ತಕದ ಮೂಲ ದ್ರವ್ಯ.
ವೀರಪ್ಪನಿಗೆ ನಾಡಿನ ಸೂಕ್ಷ್ಮಗಳನ್ನು ತಿಳಿಸುತ್ತಾ ಅವನಿಂದ ಕಾಡಿನ ಸೂಕ್ಷ್ಮಗಳನ್ನು ಅರಿಯುತ್ತಾ, ಅವನ ತಂಡದೊಡನೆ ಹಾಗೂ ಹೀಗೂ ಜಗಳಕ್ಕೆ ಇಳಿಯುತ್ತಾ ಅವರು ಕೊಟ್ಕದ್ದನ್ನು ತಿನ್ನುತಾ, ತಮಾಷೆ ಮಾಡುತ್ತಾ, ಮಾಡಿಕೊಳ್ಳುತ್ತಾ ಸಾಗುವ ಅವರ ಹದಿನಾಲ್ಕು ದಿನಗಳು uneventful ಆಗಿ ಮಾತ್ರ ಇರಲಿಲ್ಲ ಅನ್ನಿಸುತ್ತದೆ.
ವೀರಪ್ಪನ ಕಾಡು ಪ್ರಾಣಿಗಳ instinct, ಸಂಗೀತ ಪ್ರಜ್ಞೆ, ಶರಣಾಗತಿಯ ಆಕಾಂಕ್ಷೆ, ಕಾಡು ನ್ಯಾಯಗಳ ಮೂಲಕ್ಕೆ ಈ ಪುಸ್ತಕ ಹೋಗುವುದಲ್ಲದೆ ಆ ನಂತರದ ದಿನಗಳಲ್ಲಿ ಆತ ಎಸಗಿದ ಮಹಾಪರಾಧಗಳ ಮೂಲದ ಬಗ್ಗೆಯೂ ಇದು ಸೂಕ್ಷ್ಮವಾಗಿ ತಿಳಿಸುತ್ತದೆ. ಕಡೆಗೂ ಆತ ನೂರಕ್ಕೂ ಹೆಚ್ಚು ಮನುಷ್ಯರನ್ನ ಕೊಂದ ನರಹಂತಕ ಎಂಬುದನ್ನ ದಾಟಿಸಲು ಮರೆಯುವುದಿಲ್ಲ ಕೃಪಾಕರ- ಸೇನಾನಿ ಯವರ ಈ ಪುಸ್ತಕ!

Comments
Post a Comment