Skip to main content

Posts

The Modi disruption

 “ Modi disruption” -  A book by Arun S Kadian ################################### This book is written with extreme adulation towards PM Narendra modi. This is not a critical examination but rather a chronological analysis of all that glitters. It makes general claims and observations of things which are already in the public domain of what worked in the current Modi dispensation.  This includes but not limited to schemes like DBT, UPI, Jan dhan, support to adhar, ujwala scheme for LEDs, free cooking gas for domestic purposes, support during COVID, GST implementation, Ram mandir, abrogation of article 370, india’s push towards green initiatives in solar, wind, ethanol blending (???).  It has a lot of other sneak peeks into Modi’s gujarat, his affiliation with RSS, Jan sangh, fight with Gujarat’s BJP leadership in the 1990s, elevation to the centre and how he used that to go back to the state as the chief minister in charge for few months and rest is history.  T...
Recent posts

ತೇಜಸ್ವಿ ಪ್ರಸಂಗಗಳು

  ತೇಜಸ್ವಿಯವರನ್ನೊಮ್ಮೆ ಭೇಟಿ ಮಾಡಿದಾಗ ಅವರು ತುಂಬಾ ಸಾವಧಾನವಾಗಿ ಮಾತನಾಡುತ್ತಿದ್ದರು. ಅದು ಅವರ ಪಕ್ಷಿಗಳ ಫೋಟೋ ಪ್ರದರ್ಶನ ಕಾರ್ಯಕ್ರಮ “ಚಿತ್ರಕಲಾ ಪರಿಷತ್ತಿನಲ್ಲಿ”. ಅವತ್ತು ತಪ್ಪಿಸಿಕೊಂಡು ತಿರುಗುತ್ತಿದ್ದ ಪಕ್ಷಿಯೊಂದರ ಬಗ್ಗೆ ಅವರು ಹೇಳಿದ್ದು, ಅದರ ಕಷ್ಟ ಕೋಟಲೆಗಳು, ಅದಕ್ಕೆ ಬೇಕಾಗುವ ತಾಳ್ಮೆ, ಏಕಾಗ್ರತೆ, ದುಬಾರಿ ಕ್ಯಾಮೆರಾ ಮತ್ತದರ ಲೆನ್ಸ್ ಗಳು, ಫೋಟೋ ತೆಗೆದನಂತರ ಮಾಡುವ ಡಿಜಿಟಲ್ ಬದಲಾವಣೆಗಳು ಇತ್ಯಾದಿ.  ಅವರನ್ನು ಶಾರ್ಟ್ ಟೆಂಪೆರ್ ಅನ್ನುತ್ತಿದ್ದವರಿಗೆ ಇದೆಲ್ಲ ಅರ್ಥವಾದರೆ ಅದು ಬೇರೆಯೇ ಸಾಧ್ಯತೆಗಳನ್ನ ಹೊಮ್ಮಿಸೀತು ಅನ್ನಿಸಿದೆ ನನಗೆ. ಮಾಯಾಲೋಕ - ೧ ಬಂದಾಗ ಅದನ್ನು ಓದಿ ನಂತರ ಅಂತಹಾ ಎಂಟು ಲೋಕಗಳನ್ನು ಬರೆಯುವ ಅವರ ಯೋಜನೆಯನ್ನು ಎಲ್ಲೋ ಕೇಳಿ ಕಾತರಿಸಿದ್ದೆವು ಆದರೆ ಅವರೇ ಇಲ್ಲವಾದರು!  ಅರ್ಬನ್ ಪರಿಸರದಲ್ಲಿ ಹುಟ್ಟಿದ ಹುಡುಗರಿಗೆ ಅವರು ನೋಡಿರದ ಲೋಕವೊಂದರ ಅನೂಹ್ಯತೆಯನ್ನ ಹಾಗೆಯೇ ಸೆಮಿ ಅರ್ಬನ್ ಅಥವಾ ಹಳ್ಳಿ ಗಳಲ್ಲಿ ಹುಟ್ಟಿ ಪಟ್ಟಣಕ್ಕೆ ಬಂದ ಹುಡುಗ/ಗಿಯರಿಗೆ ಅವರು ಬಿಟ್ಟು ಬಂದ ಮತ್ತು ಬಹುಶ ಮತ್ತೆ ಹೋಗಲಾಗದ (?) ಪರಿಸರವೊಂದರ ಅದರ ಅಗಾಧ ಸೆಳೆತವನ್ನ ತೇಜಸ್ವಿಯವರ ಬರಹಗಳು ಉಳಿಸಿಕೊಂಡಿರುವುದರಿಂದ ಅದು ಇವತ್ತಿಗೂ ತನ್ನ ಸೆಳೆತವನ್ನು ಹೆಚ್ಚಿಸಿಕೊಳ್ಳುತ್ತಿದೆ. ನಾವು ಬಯಸಿದ ಆದರೆ ಬದುಕಲಾರದ ಬದುಕು ಸದಾ ಸೆಳೆಯುತ್ತಲೇ ಇರುತ್ತದೆ ಥೇಟ್ ತೇಜಸ್ವಿಯ ಹಾಗೇ! ಇಲ್ಲಿರುವ ಎಲ್ಲ ಪ್ರಸಂಗಗಳೂ ಅವರನ...

ದೇವರ ತೇರಿಗೂ ಗಾಲಿಗಳು ಬೇಕು!

  ದೇವರ ತೇರಿಗೂ ಗಾಲಿಗಳು ಬೇಕು… “ಮರದೊಳಗಡಗಿದ ಬೆಂಕಿಯಂತೆ  ಎಲ್ಲೋ ಅಡಗಿದೆ ಬೇಸರ  ಏನೋ ತೀಡಲು ಏನೋ ಕಾಡಲು  ಹೊತ್ತಿ ಉರಿವುದು ಕಾತರ “ ….ಗೋ ಕೃಷ್ಣ ಅಡಿಗ  ಭವ್ಯರ ಕವನಗಳನ್ನ ನಾನು ಮೊದಲು ಓದಿದ್ದು ಅವಧಿ ತಾಣದಲ್ಲಿ. ಬಹುಶ ಬುದ್ಧನ ಬಗ್ಗೆ ಅನ್ನಿಸುತ್ತದೆ.  ಅವರು ಬುದ್ಧನನ್ನ reimagine ಮಾಡಿದ್ದರು. ನಂತರ ಅವರ ನೇರ ವಾಚನವನ್ನ ಸುಚಿತ್ರದಲ್ಲಿ ಕೇಳಿದ್ದು.  ಅವತ್ತು ಜಿ ಏನ್ ಮೋಹನ್ ಸರ್ ಮತ್ತು ಉಮಾ ಮುಕುಂದ ಅವರೂ ಕೂಡಾ ತಮ್ಮ ತಮ್ಮ ಕವನಗಳನ್ನ ಓದಿದ್ದರು. ಭವ್ಯ ನನಗೆ ನಮ್ಮಂತೆ ಅನ್ನಿಸಿದ್ದರು…ಅಂದರೆ ಈಗೀಗ ಕಾವ್ಯ ಸಹವಾಸದಲ್ಲಿರುವವರು “ ಬರೆದ ಸಾಲಿಗೆ, ಹೊಳೆದ ತಾರೆಗೆ ನಿಬ್ಬೆರಗಾಗೋ ರೀತಿ!” ಒಂದೇ ಆಗಿತ್ತು.  ಅವತ್ತು ಅವರು ತಮ್ಮಲ್ಲಿ ಕವಿತೆ ಹುಟ್ಟುವಿಕೆಯ ಕಿಡಿಯ ಬಗ್ಗೆ ಹೇಳಿಕೊಂಡಿದ್ದರು. ಅವರು ಕವಿತೆಯನ್ನ ಬರೆದಷ್ಟೇ ಚೆನ್ನಾಗಿ ಓದುತ್ತಾರೆ ಅನ್ನಿಸಿತು. ಅವೆಲ್ಲವನ್ನ ಪುಸ್ತಕ ರೂಪದಲ್ಲಿ ತರಲು ಸಾಕಷ್ಟು ಸಮಯ ಕೊಂಡರು ಅನ್ನಿಸಿದರೂ, ಈ ಸಂಕಲನದ ಪರಿಚಯದ ಮಾತುಗಳು ಹೊಸದಾಗಿ ಬರೆಯುವವರಿಗೆ ತೋರುಬೆರಳಿನಂತಿದೆ.  ಕೆ ವೈ ಏನ್ ಅವರ ಸೊಗಸಾದ ಪ್ರವೇಶಿಕೆ ಭವ್ಯರನ್ನು, ನಮ್ಮನ್ನು ಕಾವ್ಯದ ಮತ್ತು ಬರೆವಣಿಗೆಯ ದಾರಿಯ ಹಳ್ಳ ದಿಬ್ಬಗಳ ಬಗ್ಗೆ ಎಚ್ಚರಿಸುತ್ತದೆ. ಏನನ್ನು ಕಾಣಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಆರತಿ ಹೆಚ್ ಏನ್ ರವರ ಸಾಲುಗಳು ಸಭ್ಯತೆಯನ್ನು ಮೀರದ ಭವ...

ತೇಜೋ ತುಂಗಭದ್ರಾ

  Tejo-Tungabhadra ಈ ಪುಸ್ತಕವನ್ನ ಎಷ್ಟು ಲೇಟ್ ಆಗಿ ಓದಿದೆಯೆಂದರೆ ಅಷ್ಟರಲ್ಲಿ ಇದು ಹತ್ತಾರು ಮುದ್ರಣ ಕಂಡಿತ್ತು. ಒಂದು ಬಾರಿ ಅರ್ಧ ಓದಿ ಬಿಟ್ಟು ಮತ್ತೆ ಮೊದಲಿನಿಂದ ಪೂರ್ತ ಓದಿದೆ. ವಸುಧೇಂದ್ರರ ಮಿಕ್ಕ ಕಥೆಗಳಲ್ಲಿ, ನೀಲ್ಗತೆಗಳಲ್ಲಿ ಇದ್ದಂತಲ್ಲ ಇಲ್ಲಿಯ ಭಾಷೆ…this was honey dew!  ಬಳ್ಳಾರಿಯ ಬಿಸಿ, ಗಡಸುತನ ಇಲ್ಲಿ ತುಂಗಭದ್ರೆಯಲ್ಲೂ ಇಲ್ಲ, ತೇಜೋದಲ್ಲಂತೂ ಭಾಷೆ ಅತ್ಯಂತ ಮೃದು, ಥೇಟ್ ಬೆಲ್ಲ ಮತ್ತು ಗ್ಯಾಬ್ರಿಯಲ್ನ ನಿಷ್ಕಲ್ಮಶ ಪ್ರೀತಿಯ ಹಾಗೆ.  ಐತಿಹಾಸಿಕ ಫಿಕ್ಷನ್ ಬರೆಯುವಾಗಿನ ತಯಾರಿ ಯಾವ ರೀತಿ ಇರುತ್ತದೆ ಇರಬೇಕು ಎಂಬುದು ನನಗೆ ತಿಳಿದಿಲ್ಲ. ಇದು ಕತ್ತಲಲ್ಲಿ ಕರಿಯಾನೆಯನ್ನು ಕುರುಡರು ಮುಟ್ಟಿದ ಹಾಗೆ ಎಂಬುದು ನನ್ನ ಅನಿಸಿಕೆ. ಇದಕ್ಕೆ ಇಂಬು ಕೊಡುವಂತೆ     ಜಿ ಎಸ್ ಎಸ್ ರವರ “ ಚರಿತ್ರೆ ಎಂದರೆ ಅದೊಂದು ಮಬ್ಬು ಕವಿದ ಸುರಂಗ, ಪಂಜು ಹಿಡಿದು ಒಳ ನಡೆದರೆ ಶತಮಾನಗಳ ನೋವು!” ಎಂಬ ಮಾತುಗಳು ಪುಷ್ಟಿಕೊಡುತ್ತವೆ.  ಇಲ್ಲಿ ವಸುಧೇಂದ್ರರು ಐತಿಹಾಸಿಕ ಗ್ರಂಥಗಳನ್ನ ಮತ್ತು ಅದಕ್ಕಿಂತಾ ಮುಖ್ಯವಾಗಿ ತಮ್ಮ ಇಮ್ಯಾಜಿನೇಶನ್ ಅನ್ನ ಪಂಜಿನಂತೆ ಹಿಡಿದಿದ್ದಾರೆ. ‘ಲೆಂಕತನ’ ಪದ್ಧತಿ ಇಲ್ಲಿ ಬರಿಯ ಆಚರಣೆಯಲ್ಲ ಬದಲಾಗಿ ಇಡೀ ಕಥೆಯ, ಶ್ರೀ ಕೃಷ್ಣದೇವರಾಯರ ವ್ಯಥೆಯ, ಸತ್ತವನ ಚಿತೆಯ ಭಾಗವಾಗಿದೆ. ಹಡಗುಗಳಲ್ಲಿ ಎಂದಿಗೂ ಉಪದ್ರ ಮಾಡುವ ಇಲಿ ಹೆಗ್ಗಣಗಳು ಪಾತ್ರವಾಗಿ, ತಾಪತ್ರಯವಾಗಿ ಕಡೆಗೆ ಬದುಕು ಸಾವಿನ ನ...

ಕವಿರಾಜ್ ಮಾರ್ಗ

ಕವಿರಾಜ್ ಸರ್  ನಿಮ್ಮ ಸಿನಿ ಸಿನಿ ನೆನಪುಗಳ ಗುಚ್ಛವನ್ನ ಪೂರ್ತಿಯಾಗಿ ಓದಿ ಮುಗಿಸಿದಮೇಲೆ ನನಗನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿಬಿಡಬೇಕು ಅನ್ನಿಸಿತು. ಇದು ಪುಸ್ತಕ ವಿಮರ್ಶೆಯಂತೂ ಖಂಡಿತಾ ಅಲ್ಲ…ನೆನಪುಗಳನ್ನು ಎಂತ ವಿಮರ್ಶೆ ಮಾಡುವುದು? ಅವುಗಳನ್ನು ಸವಿಯಬೇಕಷ್ಟೆ. ಎಲ್ಲದಕ್ಕಿಂತ ಮೊದಲಿಗೆ ನನಗೆ ನಿಮ್ಮ ಸರಳತೆ, ನೇರವಂತಿಕೆ ಮತ್ತು ಸ್ಪುಟವಾದ ಭಾಷೆ ಇಷ್ಟವಾಯಿತು. ಕವಿತೆ ಬರೆಯುವ ಹಲವರ ಗದ್ಯ ಯಾಕೋ ಓದಲು ಅಷ್ಟು ಚೇತೋಹಾರಿಯಾಗಿರಲ್ಲ, ಅಥವಾ ಕವಿಗಳಿಗೆ ಸುಧೀರ್ಘವಾಗಿ ಬರೆಯುವ ವ್ಯವಧಾನ ಆಸಕ್ತಿ ಇರುವುದಿಲ್ಲವೇನೋ…ನೀವು ಹಾಗಲ್ಲವೇ ಅಲ್ಲ.  ನಿಮ್ಮ ಒಡನಾಟಕ್ಕೆ ಬಂದವರ, ಕೈ ಹಿಡಿದು ತಂದವರ, ಸಹಾಯಹಸ್ತ ಚಾಚಿದವರ ಬಗ್ಗೆಯೆಲ್ಲಾ ಎಷ್ಟೊಂದು ಅಭಿಮಾನದಿಂದ ಬರೆದಿದ್ದೀರಾ. ಹಾಗೆಯೇ ಸಭ್ಯತೆ ಮೀರಿದ ಆ ಕ್ಯಾತೆ ‘ಪತ್ರಕರ್ತನ’ ಬಗ್ಗೆಯೂ ಎಷ್ಟು ನಿಷ್ಠೂರತೆ ಇಂದ ವ್ಯವಹರಿಸಿದ್ದೀರಿ? ಖುಷಿಯಾಯಿತು. ಬರಹಗಾರ ಅಂದರೇ ನನ್ನ ಅಭಿಪ್ರಾಯದಲ್ಲಿ ಎಲ್ಲರೊಡನಿದ್ದೂ ತನ್ನದೇ ಆದ ಸ್ವಂತಿಕೆ ಮತ್ತು ಅಭಿಪ್ರಾಯ ಹೊಂದಿದವನು. ನಿಮ್ಮ ಹಾಗೆ! ನೀವು ಅಣ್ಣಾವ್ರನ್ನ, ವಿಷ್ಣು ಸಾರ್, ಅಂಬರೀಶ್, ಪುನೀತ್ ಇವರನೆಲ್ಲಾ ಮಾನವೀಯತೆಯ ನೆಲೆಗಟ್ಟಿನಲ್ಲಿ ನೋಡಿರುವುದು ಅವರ ಚಿತ್ರಗಳಿಗೆ ಒಳ್ಳೊಳ್ಳೆಯ ಹಾಡುಗಳನ್ನ ಬರೆದರೂ ಯಾವುದನ್ನೂ “taken for granted” ಮಾಡಿಕೊಳ್ಳದೇ ಇರುವುದು ಅದರಲ್ಲೂ ಇಂದಿನ “entitlement” ಜಗತ್ತಿನಲ್ಲಿ ಸ್ವಲ್ಪ ಅಪರೂಪ. ಇಷ್ಟೇ ಅಲ...

Kaaju biscuit!

  #  ಕಾಜು ಬಿಸ್ಕೆಟ್ # ಕಿರಣ್ ನಿಮ್ಮ ಕಥಾ ಸಂಕಲನದ ಮೂಲ ದ್ರವ ಹುಡುಕಾಟ ತಾನೇ ? ಬಹುಷ ನಿಮ್ಮ ಬದುಕಿನ ಹುಡುಕಾಟವೇ ಇಲ್ಲಿ ನವಿರಾದ ಕಥೆಗಳಾಗಿ ಹೊಮ್ಮಿರಬೇಕು ಅಲ್ಲವೇ? ನಿಮ್ಮ ಕಥೆಗಳ ವಸ್ತುವಿನ ಅದನ್ನು ಪ್ರಸ್ತುತಪಡಿಸುವ ಹಾದಿಯಲ್ಲೆಲ್ಲಾ ನನಗೆ ಹೊರಗಿನಿಂದ ನಿಂತು ಕಥೆ ಹೇಳುವ ಅದರ ಮೂಲಕ ಕಥೆಗಳನ್ನ “ to let it be ” ಆಗಿಸುವ ನಿಮ್ಮ ಜಾಣ್ಮೆ ಅಥವಾ ವ್ಯಕ್ತಿತ್ವ ಕಾಣಿಸುತ್ತದೆ. ನಿಮ್ಮ ಆಸುಪಾಸು ಬಂದರೆ ನಾವೂ ಕಥೆಯಾಗುತ್ತೇವೆನೋ ಎನ್ನಿಸುವಷ್ಟು ಸರಳ ಮತ್ತು ಸೂಕ್ಷ್ಮ ಕಥೆಗಳು ನಿಮ್ಮವು.  ಕಥೆಗಾರನಿಗೆ ತನ್ನ ಮತ್ತು ಸುತ್ತಮುತ್ತಲಿನ ಬದುಕಿನಲ್ಲೇ ವಸ್ತುಗಳು ಸಿಕ್ಕರೂ ಅದರ ಜಿಜ್ಞಾಸೆ ಮಾತ್ರ ಅವನಿಗೇ ಸ್ವಂತದ್ದು. ಅದು ಕಥೆಗಳಿಗೆ ಸಕಾರಣವಾಗಿ ದಕ್ಕಿದರೆ ಅದು ಕಥೆಯ ಓದುಗರ ಪುಣ್ಯ, ಅದು “ಇಲ್ಲಿ ದಾವಣಗೆರೆಯವರು ಇದ್ದಾರ? , 21 ನೇ ಕ್ರೋಮೋಸೋಮು, ಕೊಲೆ, ಅಪ್ಪ ಸೈಕಲ್ ಕಲಿಸಲಿಲ್ಲ “ ಕಥೆಗಳಲ್ಲಿ ವ್ಯಕ್ತವಾದರೆ……ಸಮಾಜದ ಮೇಲಿನ ಒಂದಷ್ಟು ಅಸಹನೆ “ಪ್ರತಿಮೆ, ಕಾಣೆಯಾದವರು, ಕಾಜು ಬಿಸ್ಕೇಟ್, ಶ್ರೀಧರ ನನಗೆ ಚೆನ್ನಾಗಿ ಗೊತ್ತು” ಕಥೆಗಳಲ್ಲಿ ವ್ಯಕ್ತವಾಗಿದೆ. ಅದರ ಜೊತೆಗೇ ಬೇರೆಯವರ ಚರ್ಮ, ದೇಹ ಮನಸಿನಲ್ಲಿ ಹೊಕ್ಕು ಅರಿವ ವಿಷಯಗಳು “ ಪರಕೀಯ, ಒಂದು ಮಧ್ಯಾಹ್ನ, ಎಂಟನೆಯ ದಿನ, ಅವರು ಮತ್ತೆ ಬರುತ್ತಾರೆ” ಎಂಬ ಕಥೆಯಲ್ಲಿ ಸಂಭವಿಸಿದೆ. ಒಟ್ಟಿನಲ್ಲಿ ಸ್ವಂತದ್ದು, ಅನುಭವಕ್ಕೆ ಬಂದಿದ್ದು, ಜಿಜ್ಞಾಸೆಗೆ ಏಟುಕಿದ್ದು/ ಏಟುಕದಿದ...

The healer’s journey

The healer’s journey - Dr. K B Suryakumar  Venus circus fire issue in Srirampura,  Gangarams building collapse near current city center,  Tannery road arrack tragedy (ಕಳ್ಳ ಬಟ್ಟಿ ಸಾರಾಯಿ) leading to thousands of deaths in 1980s has one thing in common - Dr K B Suryakumar was the forensic expert in all these cases.  Dr Suryakumar uncle was also the personal physician to Field Marshal K M Cariappa, and his close proximity to the great soldier is well articulated in this book !  Being the foremost forensic expert in the government of Karnataka, he served in Coorg, Bangalore, Mangalore etc doing both forensic and regular practice for 4 decades and this book is a culmination of all his experiences where he upheld the ethics of his profession with a touch of humility!  He is not just a care giver, healer, doctor, forensic expert but a great human being and an amazing storyteller too. He was also my aunt Manjula Devi s classmate and classmate of Girijamma, the most ...