Skip to main content

The heart of darkness by Joseph Conrad !



ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. 

ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright ! 

ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತಿ ತಪ್ಪಿರುವುದಾಗಿಯೂ ವೋಲೆಸೋಯಂಕಾನಿಗೆ ಬಂದಿರುವುದಾಗಿಯೂ ಹೇಳಿರುತ್ತಾರೆ. 

ಇಲ್ಲಿ ಒಂದು ಅಂಶ ಗಮನಿಸಬೇಕು. ಇತ್ತೀಚೆಗಷ್ಟೇ ಸಾಹಿತ್ಯದ ನೊಬೆಲ್ ಪಾರಿತೋಹಕ ಪಡೆದ ಅಬ್ದುಲ್ ರಹ್ಮಾನ್ ಗುರ್ನಾ ಆಫ್ರಿಕಾ ಮೂಲದವರಾದರೂ ಅವರೀಗ ಬ್ರಿಟಿಷ್ ಪ್ರಜೆ , ಅವರ ಸಾಹಿತ್ಯದಲ್ಲೂ ಪ್ರಧಾನವಾಗಿ ವಸಾಹತುಶಾಹಿಯ ಕರಿ ಛಾಯೆಯಿದೆ ವಲಸೆಯ ಬಗೆಗಿನ ವಿಚಾರಗಳಿವೆ ಮತ್ತು ಅವರದನ್ನು ಸಮರ್ಥವಾಗಿ ಬಿಂಬಿಸಿದ್ದಾರೆ ಎನ್ನುವುದು. 

ಇದೇ ವಿವರಣೆಯನ್ನು ಕೆರಿಬಿಯನ್ ಮತ್ತು ಭಾರತ ಮೂಲದ V S Naipaul ರವರ ಸಾಹಿತ್ಯದ ಬಗ್ಗೆಯೂ ಹೇಳುತ್ತಾರೆ, ಆದರೆ ಅವರೂ ಬ್ರಿಟನ್ಗೆ ವಲಸೆ ಹೋಗಿ ಅಲ್ಲಿಯೇ ನೆಲಸಿ ಬ್ರಿಟೀಶ್ ಪ್ರಜೆಯಾಗಿದ್ದವರು. ಈ ಎಲ್ಲ ಸಂದರ್ಭಗಳಲ್ಲೂ ಸಾಹಿತ್ಯದ ಜೊತೆಗೆ ರಾಜಕೀಯ ಎಗ್ಗಿಲ್ಲದೆ, ಸಿಗ್ಗಿಲ್ಲದೆ ತೂರಿದೆ ಎಂಬುದು ಹಲವರ ವಾದ. 

ಇದನ್ನೆಲ್ಲಾ ಹೇಳಿದ ಕಾರಣ ನಾನು ಓದಿದ ಜೋಸೆಫ್ ಕಾನ್ರಾಡ್ನ “ The Heart of Darkness “ ಎಂಬ ಕೃತಿ. ಇದನ್ನು ಆತ ರಚಿಸಿ 125 ವರುಷಗಳೇ ಆಗಿದ್ದರೂ ಇದರಷ್ಟು ಸಮರ್ಥವಾಗಿ ವಸಾಹತುಶಾಹಿಯ ಕರಾಳತೆಯನ್ನು, ಬರ್ಬರತೆಯನ್ನು, ಮನುಷ್ಯ ವಿರೋಧಿ ತನವನ್ನು ಬೆರಳೆಣಿಕೆಯಷ್ಟು ಕೃತಿಗಳು ಮಾತ್ರ ಹೊರತರಲು ಯತ್ನಿಸಿವೆ. 

ಅದರಲ್ಲೂ ಜೋಸೆಫ್ ಬಿಳಿಯನಾಗಿ, ಸ್ವತಃ ಬ್ರಿಟಿಷ್ ನೇವಿಯಲ್ಲಿ ಕೆಲಸಮಾಡಿದವನಾಗಿ, ಪ್ರತ್ಯಕ್ಷವಾಗಿ ನೋಡಿದ್ದನ್ನು ಕೇಳಿದ್ದನ್ನ ಪರಿಣಾಮಕಾರಿಯಾಗಿ ಹೇಳುವುದು ಸಾಧ್ಯವಾಗಿದೆ ಮತ್ತು ಅವನ ನರೇಷನ್ಗೆ ಒಂದು ಅಧಿಕೃತತೆ ದೊರೆತಿದೆ. ಇಲ್ಲಿ ಬ್ರಿಟಿಷ್ ಸರ್ಕಾರವು ಆಫ್ರಿಕಾದ ಹೃದಯ ಭಾಗದಲ್ಲಿರುವ ಕಾಂಗೋ ದೇಶದಲ್ಲಿ ನಡೆಯುತ್ತಿದ್ದ ದಂತ ಚೋರತನ, ಅದಕ್ಕಾಗಿ ನಿಯೋಜಿಸಿದ್ದ ಕಂಪನಿಯ ಪೋಸ್ಟ್ಗಳು, ಆ ಭಾಗದ ಮಿನಿಸ್ಟರ್ಗಳಂತೆ ವರ್ತಿಸುತ್ತಿದ್ದ ಅದರ ಮ್ಯಾನೇಜರ್ಗಳು, ಅವರ ಕ್ರೂರತನ, ಸ್ಥಳೀಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದುದರ ರೀತಿ, ಅವರ ಜೀತ, ಅವರಿಗೆ ತಗುಲುತ್ತಿದ್ದ ಖಾಯಿಲೆಗಳು, ಬ್ರಿಟಿಷ್ ನಾವಿಕರು ಗುಪ್ತವಾಗಿಡಬೇಕಾಗಿದ್ದ ಹಲವು ವಿಚಾರಗಳು ಹೀಗೆ ಸಭ್ಯ ನಾಗರಿಕ ಸಮಾಜವೆಂದು ಫೋಸು ಕೊಡುತ್ತಿದ್ದ ದೇಶ ಮತ್ತು ಸಂಸ್ಕೃತಿಯೊಂದು ಹೇಗೆ ಆದುನಿಕ ಸವಲತ್ತು, ಶಸ್ತ್ರಾಸ್ತ್ರಗಳಿರದ್ದ ಕಾಂಗೋದಂತಹಾ ಹಲವಾರು ದೇಶ ಮತ್ತು ಜನಗಳನ್ನು ಬಳಸಿಕೊಂಡು, ಕೆಟ್ಟದಾಗಿ ನಡೆಸಿಕೊಂಡಿದ್ದಾರೆಂಬುದು ಪರಿಚಯಿಸಲ್ಪಡುತ್ತದೆ. 

ಇಲ್ಲಿ Heart of darkness ( ಕಪ್ಪಿಟ್ಟ ಹೃದಯ) ಅಲ್ಲಿನ ಬ್ರಷ್ಟ ಅಧಿಕಾರಿಗಳದ್ದು ಮಾತ್ರವಲ್ಲದೆ ಇಡೀ ಸಾಮ್ರಾಜ್ಯಶಾಹಿ, ಧನದಾಹಿ, ವಸಾಹತುಶಾಹಿಯ ಕ್ರೂರ ವ್ಯವಸ್ಥೆಯದ್ದೇ ಎಂಬುದನ್ನು ಅರಿಯಬೇಕಾಗುತ್ತದೆ. 

ಭಾರತದಂತಹಾ ಸಾವಿರಾರು ವರ್ಷದ ನಾಗರಿಕತೆ, ಇಲ್ಲಿ ಸ್ಥಾಪಿತವಾಗಿದ್ದ ವ್ಯವಸ್ಥೆ, ಕುಶಲತೆ, ವ್ಯಾಪಾರ, ಸಂಸ್ಕೃತಿ, ಧರ್ಮ, ಶಿಕ್ಷಣ ಮುಂದಾದ ವ್ಯವಸ್ಥೆಗಳು ಆಫ್ರಿಕಾದ ಹತ್ತಾರು ದೇಶಗಳಲ್ಲಿ ಅಷ್ಟಾಗಿ ಇಲ್ಲದಿದ್ದುದರಿಂದಲೇ ಏನೋ ಬ್ರಿಟಿಷರು, ಜರ್ಮನ್ನರು, ಫ್ರೆಂಚರು, ಡಚ್ಚರು, ಬೆಲ್ಜಿಯಂನವರು ಶತಮಾನಗಳ ಕಾಲ ಇಡೀ ಆಫ್ರಿಕಾವನ್ನ, ಮನುಷ್ಯ ಮತ್ತು ಪ್ರಾಣಿಗಳನ್ನು, ಅಲ್ಲಿನ ಸಂಪತ್ತನ್ನ ತಿರಿದು ಮುಕ್ಕಿದ್ದಾರೆ ಮತ್ತು ಅದನ್ನು ಹಲವೆಡೆ ಈಗಲೂ ಮುಂದೂವರಿಸಿದ್ದಾರೆ!

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ