ತೇಜಸ್ವಿಯವರ ಮೇಲಿನ ಪ್ರೀತಿಯಿಂದ ಮತ್ತು ನಾಗೇಶ್ ಹೆಗ್ಡೆಯವರ ಮೇಲಿನ ನಂಬಿಕೆಯಿಂದ ಈ ಕೃತಿಯನ್ನು ಓದಲು ಮೊದಲಿಟ್ಟೆ. ಈ ಇಬ್ಬರ ಆಲ್ಮೋಸ್ಟ್ ಎಲ್ಲ ಕೃತಿಗಳನ್ನು ಓದಿರುವೆನಾದರೂ ಪ್ರತಿ ಹೊಸ ಕೃತಿಯಲ್ಲೂ ಕಾಣುವುದು ಆಳವಾದ ಅಧ್ಯಯನ, ಚಿಕಿತ್ಸಕ ಗುಣ,ಸಂಶೋಧಕನ ಶಿಸ್ತು, ಮಗುವಿನ ಬೆರಗು, ಪರಿಣಾಮಕಾರಿ ಸಂವಹನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸುತ್ತ ಮುತ್ತಲಿನ ಪ್ರಕೃತಿ, ಪ್ರಾಣಿ, ಪಕ್ಷಿ, ಜನರ ಮೇಲನ ಆಗಾದ ಪ್ರೀತಿ. ಪಶ್ಚಿಮ ಘಟ್ಟಗಳ ಮಹತ್ವದಿಂದ ಹಿಡಿದು ನಮ್ಮ ಸುತ್ತಮುತ್ತಲಿನ ಚಿಟ್ಟೆ, ಕೀಟ, ಹೂವು, ಉರಗ, ಓತಿ, ವಿಕಾಸ, ಅರಣ್ಯ ಸಂರಕ್ಷಣೆ, ಆ ಡಿಪಾರ್ಟ್ಮೆಂಟ್ ನ ಕಾರ್ಯವೈಖರಿ, ತಾತ್ಸಾರ, ಗಾಡ್ಗಿಲ್ ಸಮಿತಿ, ಕಸ್ತೂರಿರಂಗನ್ ಸಮಿತಿಗಳ ವರದಿ, ಅಣಬೆ, ಆರ್ಕಿಡ್, ಆಹಾರ ಸರಪಳಿ, ಜಾಗತಿಕ ಹವಾಮಾನ ವ್ಯತ್ಯಯ, ತಾಪಮಾನ ಹೇರಿಕೆ, ಜಲಪಾತಗಳು, ಒಂದೇ ಎರಡೇ? ಎಲ್ಲವೂ ಮನುಷ್ಯ ಕೇಂದ್ರಿತ ಆಗಿಬಿಟ್ಟಿರುವಾಗ (Anthropology ) ನಾವು ಮಾಡುತ್ತಿರುವ ಪ್ರತಿ ಕೆಲಸ, ಚಟುವಟಿಕೆ ಅದರಲ್ಲೂ ಔದ್ಯಮಿಕ ಕ್ರಾಂತಿಯ (industrial revolution) ಮತ್ತು ಅದರ ನಂತರದ ಅಂಧ / ರಾಶಿ ರಾಶಿ ಉತ್ಪಾದನೆ (mass production), ಸಂಪನ್ಮೂಲಗಳ ಅತಿಯಾದ ದುರ್ಬಳಕೆ ಇವೆಲ್ಲವೂ ಭೂಮಿಯ ಮೇಲೆ ಕೋಟ್ಯಾ0ತರ ವರ್ಷಗಳ ಮೇಲೆ ಮೊದಲಬಾರಿ ನಮ್ಮಿಂದ ವ್ಯತ್ಯಯ ಆಗುತ್ತಿರುವುದು ಸಾರ ಸಗಟಾಗಿ ಸಾಬೀತಾಗಿದೆ (Anthropocene). ಮನುಷ್ಯ ಮರದ ಕೊಂಬೆಯ ಮೇಲೆಯೇ ನಿಂತು ಅದನ್ನೇ ಕಡಿಯು...