ಅನಂತ ಕುಣಿಗಲ್ ನಮ್ಮ ಜಿಲ್ಲೆಯವರು.
ಹಳ್ಳಿಯಲ್ಲಿ ಬೆಳೆದು ಪೇಟೆಯಲ್ಲಿ ಬದುಕು ಕಟ್ಟಿಕೊಂಡವರು. ಇಡೀ ಸಾಹಿತ್ಯ ಬಳಗದ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿರುವವರು. ಒಮ್ಮೆ ಪುಸ್ತಕಗಳ ವ್ಯಾಪಾರದ ಬಗ್ಗೆ ಮತ್ತು ಅದರೊಳಗಿನ ರಾಜಕೀಯದ ಬಗ್ಗೆ ಅಂಕಣ ಬರೆದಿದ್ದರು ಅದನ್ನು ಓದಿ ಇಷ್ಟು ಚಿಕ್ಕ ವಯಸ್ಸಿಗೆ (25) ಇಷ್ಟೆಲ್ಲಾ ಅರ್ಥ ಮಾಡಿಕೊಂಡಿದ್ದಾರೆ ಎಂದು ಖುಷಿ ಆತಂಕ ಆಯಿತು. ಖುಷಿ ಅವರ ತಿಳುವಳಿಕೆಯ ಬಗ್ಗೆ ಮತ್ತು ಆತಂಕ ಅದು ಅವರನ್ನು ಸಿನಿಕತನಕ್ಕೆ ದೂಡಬಹುದೇನೋ ಎಂಬುದರ ಬಗ್ಗೆ!
ಇಷ್ಟೆಲ್ಲಾ ಹೇಳಿದ ಉದ್ದೇಷ ನಾನು ಓದಿದ ಅವರ ಕಾದಂಬರಿ "ರೌದ್ರಾವರಣo ". ಅವರೇ ಹೇಳುವ ಹಾಗೆ ಅದು ತನ್ನ ರೋಚಕತೆಯನ್ನ ಕಡೆಯವರೆಗೂ ಉಳಿಸಿಕೊಂಡಿದೆ ಮತ್ತು ಅದನ್ನು ಅವರ ಮುಂದಿನ ಕಾದಂಬರಿ " ಕಾಡ್ಗಿಚ್ಚಿ " ಗೂ ದಾಟಿಸಿದೆ. ಇತ್ತೀಚೆಗೆ ಏನೋ ಗಹನವಾದುದನ್ನು ಓದಲು ಹೊರಟ ಓದುಗ ಓದಿನ ಸಹಜ ಖುಷಿಯನ್ನು ಕಳೆದುಕೊಳ್ಳ ತೊಡಗಿದ್ದಾನೆ ಅಂತಹವನಿಗೆ ಈ ಕಾದಂಬರಿ ಓದಿನ ಖುಷಿಯನ್ನೂ ಜೊತೆಗೆ ಭಾರತದ ಹಳ್ಳಿಯೊಂದರ ಒಳ ಮಜಲುಗಳನ್ನೂ, ವರ್ಗ ಸಂಘರ್ಷ, ಹಾದರ, ತಿಕ್ಕಾಟ, ರಾಜಕೀಯ ಮೊದಲಾದ ಅನುದಿನದ ಅವಸ್ಥೆಯನ್ನು ಸರಳವಾಗಿ ಕಾಣಿಸುತ್ತದೆ. ಈ ಕಾದಂಬರಿ ಕಳೆದ ಬಾರಿಯ ಕೇಂದ್ರ ಸರ್ಕಾರ ಕೊಡುವ ಯುವ ಪುರಸ್ಕಾರಕ್ಕೂ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು ಎಂದು ಓದಿದ ನೆನಪು. ಅನಂತರವರು ಹೀಗೆಯೇ ಬರೆಯುತ್ತಿರಲಿ... ಅವರಿಗೆ ಎಲ್ಲ ಪುರಸ್ಕಾರಗಳೂ ಸಿಗಲಿ ಮತ್ತು ಅವು ಅವರನ್ನು ಪ್ರೋತ್ಸಾಹಿಸುತ್ತಿರಲಿ
Comments
Post a Comment