ನಮಗೆ ಗೊತ್ತಿಲ್ಲದ, ಗೊತ್ತುಮಾಡಿಕೊಳ್ಳಲು ಸುಲಭವಾಗಿ ಆಗದ, ಸೊ ಕಾಲ್ಡ್ ನಾಗರೀಕ ಸಮಾಜದಿಂದಾಚೆಗೆ ತಮ್ಮಷ್ಟಕ್ಕೆ ತಾವಂತೆ ಇರುವ ನಮ್ಮದೇ ಜನಗಳ ಬಗ್ಗೆ ಒಂದು organised ವ್ಯವಸ್ಥೆಗೆ ಇರುವ ಅಸಹನೆ, ಅಸಡ್ಡೆ ಮತ್ತು ಪೂರ್ವಾಗ್ರಹಗಳು ಮತ್ತು ಅದನ್ನು ಬಗ್ಗುಬಡಿಯಲು, ಅದು ಆಗದಿದ್ದರೆ ಅವರನ್ನು ತಮ್ಮ ಕಾಲಡಿಯಲ್ಲಿ ಇಟ್ಟುಕೊಳ್ಳಲು ಹುಡುಕಿಕೊಳ್ಳುವ ಮಾರ್ಗಗಳು ಇವೆಲ್ಲಾ ನಮ್ಮನ್ನು ಬೆಚ್ಚು ಬೀಳಿಸುವಂತದ್ದು!
ಕಾಡು ನಾಡನ್ನ ಮತ್ತು ಎಲ್ಲ ಮನುಷ್ಯರನ್ನ ತಾಯಿಯಂತೆ ಪೊರೆಯುತ್ತದೆ. ಕಾಡಿನ ಜೊತೆಗೇ ಅನಾಧಿಕಾಲದಿಂದಲೂ ಒಟ್ಟುಗೊಂಡಿರುವ ಕಾಡಮಕ್ಕಳು ಅದಕ್ಕೆ ಯಾವತ್ತೂ ದ್ರೋಹ ಬಗೆಯರು ಜೊತೆಗೆ ಅವರ ಇತಿಮಿತಿಯಲ್ಲಿ ಅದನ್ನು ಆಶ್ರಯಿಸುತ್ತಾರೆ ಕೂಡ. ಅದನ್ನು ಬೇಡವೆನ್ನಲು ತಡೆಯಲು ನಾವ್ಯಾರು? ನಾವು ನೀರಿಗಾಗಿ ಸಾವಿರಾರು ಅಡಿ ಪೈಪ್ ಗಳನ್ನು ಇಳಿಸಿ ಬೋರುಗಳನ್ನು ಕೊರೆದಾಗ, ಕೆರೆಗಳನ್ನು ಲೇಕ್ ವ್ಯೂ ಅಪಾರ್ಟ್ಮೆಂಟ್ ಗಳನ್ನಾಗಿ ಮಾಡಿದಾಗ, ಗಾಳಿ ನೀರನ್ನು, ಮಣ್ಣನ್ನು ಕಲುಷಿತಗೊಳಿಸಿದಾಗ ಇನ್ನೂ ಅದರ ಹಕ್ಕನ್ನು ಯಾಕೆ ಉಳಿಸಿಕೊಂಡಿದ್ದೇವೆ? ಕಾಡಜನರು ಸಾವಿರಾರು ವರ್ಷಗಳಿಂದ ಆಶ್ರಯಿಸಿದ ಕಾಡುತ್ಪತ್ತಿಯನ್ನು ಹೇಗೆ ತಪ್ಪಿಸುವ ಮನಸ್ಸು ಬರುತ್ತದೆ? ಅವರನ್ನು ಹೇಗೆ ನಕ್ಸಲ್ ಗಳನ್ನಾಗಿ ಅನುಮಾನಿಸಿ ಅದರ ಕೂಪಕ್ಕೆ ನಾವೇ ತಳ್ಳುತ್ತೇವೆ? ಇದೆಲ್ಲವನ್ನು ಓದಿದರೆ, ನೋಡಿದರೆ ಭಯವಾಗುತ್ತದೆ.
ಇದು ಎಷ್ಟು ವ್ಯಾಪಾಕವಾಗಿ, ಅವ್ಯಾಹತವಾಗಿ ಮತ್ತು ಹಾಡಹಗಲೇ ನೆಡೆಯುತ್ತದೆ ಮತ್ತು ಒಂದಿಡೀ ಸಮಾಜಕ್ಕೆ ಇದು ಹೇಗೆ ತಲುಪದೇ ಹೋಗುತ್ತದೆ ಎಂಬುದು ನಮ್ಮ ನಡುವೆ ಆಳವಾಗಿ ಬೇರೂರಿರುವ nexus ಗಳ ಬಗ್ಗೆ ಮುಖ್ಯವಾದದ್ದೇನನ್ನೋ ಕೂಗಿ ಹೇಳುತ್ತಿರುವಂತೆ ಕಾಣುತ್ತದೆ.
ಇದನ್ನು ಬರೆಯಲು ಧೈರ್ಯ ತೋರಿದ ಲೇಖಕರಿಗೆ Naveen Soorinje ಮತ್ತು ಅದನ್ನು ಪ್ರಕಟಿಸುವ ಹುಂಬತನವನ್ನು ತೋರಿದ ಪ್ರಕಾಶಕರಿಗೆ Akshatha Humchadakatte ಒಂದು ದೊಡ್ಡ Pat on the Back!
Comments
Post a Comment