"ಮೀಸಳ್ ಬಾಜಿ" ನನ್ನ ಬಹು ಇಷ್ಟದ ತಿನಿಸುಗಳಲ್ಲಿ ಒಂದು. ಬಿ ವಿ ಭಾರತಿಯವರ ಇಲ್ಲಿನ ಪ್ರಬಂಧಗಳು ಏಕಕಾಲಕ್ಕೆ ಗಂಭೀರವೂ ಮತ್ತೆ ಓಡನೆಯೇ ತಿಳಿಹಾಸ್ಯದ ಲೇಪನ ಹೊಂದಿ ನಮ್ಮನ್ನು ಆಚೆ ಈಚೆಗೆ ಓಲಾಡಿಸಬಲ್ಲವು. ತಮ್ಮ ಕಷ್ಟ ಕೋಟಲೆಗಳನ್ನೆಲ್ಲ ಕೀಟಲೆಯನ್ನಾಗಿಸುವ (ಲೇಖಕಿ ಭುವನೇಶ್ವರಿ ಹೆಗ್ಗಡೆ ಯವರ ಬಳಕೆ) ಮತ್ತದನ್ನು ಓದುಗನಿಗೆ ಉಣಬಡಿಸುವ ಬರವಣಿಗೆ ಅವರಿಗೆ ಸುಲಭಸಾಧ್ಯ.
ಜಯಂತರು ತಮ್ಮ ಕವಿತೆಗಳಲ್ಲಿ ಇಂತಹ ಪ್ರಯೋಗ ಮಾಡುವ ಏಕೈಕ ಕವಿ ಅಂತ ವಿವೇಕ ಶಾನುಭಾಗರು ಹೇಳುತ್ತಿರುತ್ತಾರೆ. ಗದ್ಯದಲ್ಲಿ ನನಗೆ ಅದನ್ನು ಭಾರತಿಯವರು ಮಾಡುತ್ತಾರೆ ಅನ್ನಿಸುತ್ತದೆ.ಅದಕ್ಕೆ ಅವರ " ಶಿಷ್ಟಚಾರಕ್ಕೆ ಗೋಲಿ ಹೊಡಿ " ಎಂಬ ನಿಲುವು ಮುಖ್ಯ ಕಾರಣ ಅನ್ನಿಸುತ್ತದೆ!
ಮೀಸಳ್ ಭಾಜಿಯಲ್ಲಿ ಅವರು ತಮ್ಮ ಬಗ್ಗೆ, ಮಗನ ಬಗ್ಗೆ, ಸ್ನೇಹಿತರ ಬಗ್ಗೆ, ಗೆಳತಿಯ ಪ್ರಿಯಕರನ ಬಗ್ಗೆ, ಗಂಡನ ಬಗ್ಗೆ,ಅವರ ಮನೆಯ ಬಗ್ಗೆ,ಅಪ್ಪ ಅಮ್ಮನ ಬಗ್ಗೆ, ಊರಿನ ಬಗ್ಗೆ, ಆಟೋ ರಾಜರ ಬಗ್ಗೆ, ಅನುದಿನದ ಕಲಾಪಗಳ ಬಗ್ಗೆ, ಭಿಡೆ ಇಲ್ಲದೆ, ಎಗ್ಗು ಸಿಗಿಲ್ಲದೆ ಗೀಚಿ ಬಿಸಾಕಿದ್ದಾರೆ !
ಅದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿರುವುದು ಪರಿಷತ್ತಿನ ಮೇಲೆ ಹೆಚ್ಚು ಗೌರವ ಮೂಡಿಸಿದೆ. ಕೆಲವೊಮ್ಮೆ ಜನಪ್ರಿಯ ಬರಹಗಳನ್ನು ಅವರು ಕಡೆಗಣಿಸಬಲ್ಲರು ಎಂಬ ಕಾರಣಕ್ಕೆ ಈ ಮಾತು. ಹಾಗೆಯೇ ಇದನ್ನು ಪ್ರಕಟಿಸದ ಛoದದ ವಸುಧೇoದ್ರರವರಿಗೆ, ಕೆಂಡಸoಪಿಗೆಯ ಅಬ್ದುಲ್ ರಶೀದ್ ರವರಿಗೆ ಒಬ್ಬ ಒಳ್ಳೆಯ ಬರಹಗಾರ್ತಿಯನ್ನು ಪರಿಚಯಿಸಿದ ಕೃತಜ್ಞತೆ ಸಲ್ಲುತ್ತವೆ.
Comments
Post a Comment