Skip to main content

Posts

The story of a shipwrecked sailor

 If you have read " Old man and the sea ", 1952 by Ernest Hemingway, you must read " The story of a shipwrecked sailor " , 1956  by Gabriel Garcia Marquez ! Its an surreal, survival experience and hence i am not writing much, however it reveals some dark secrets on the state's (columbian ) of propaganda machinery!  

One part woman : Perumal Murugan

 ಪೆರುಮಾಳ್ ಮುರುಗನ್ ನಮ್ಮ ಕಾಲದ ಅತ್ಯಂತ ಸೂಕ್ಷ್ಮ, ಅಪೂರ್ವ ಮತ್ತು ಅತ್ಯುತ್ತಮ ಬರಹಗಾರರು. ಗಾಢವಾದ ದೇಸಿ ಒಳನೋಟ, ಜೀವನಾನುಭವ, ಸಮಾಜದ ಪದರಗಳು, ಮನುಷ್ಯನ ಹಸಿವು, ಲೋಲುಪತೆ, ಸಣ್ಣ ಬುದ್ಧಿ, ಮಿ ತಿಗಳು, ಧಾರಾಳತೆ, ನಂಬಿಕೆಗಳು, ಆಚರಣೆಗಳು ಮುಂತಾದವುಗಳನ್ನು ಒಳ ಮತ್ತು ಹೊರಗಣ್ಣಿನಿಂದ ಏಕಕಾಲಕ್ಕೆ ನೋಡುವ ಛಾತಿಯುಳ್ಳವರು.  One part woman ನ್ನಿನ ಇಂಗ್ಲಿಷ್ ಅನುವಾದಿತ ಕೃತಿಯೇ ಈ ಮಟ್ಟದಲ್ಲಿರಬೇಕಾದರೆ ಮೂಲ ತಮಿಳಿನ ಅನುಭವ ಹೇಗಿರಬಹುದು ಎಂಬ ಆಲೋಚನೆಯೇ ಮತ್ಸರಕ್ಕೆ ಕಾರಣವಾಗಬಹುದು. ಅತ್ಯಂತ ಮಿತವಾಗಿ ಮಾತನಾಡುವ (ತಮಿಳಿನಲ್ಲಿ) ಪೆರುಮಾಳ್ ಮುರುಗನ್ನರ ಈ ಕೃತಿ ಬಿಡುಗಡೆಯಾದಾಗ ಸಂಪ್ರದಾಯವಾದಿಗಳಿಂದ ಮತ್ತು ಇತರೆ ಗುಂಪುಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕಾರಣ ಈ ಕೃತಿಯಲ್ಲಿ ಸಂತಾನವಿಲ್ಲದ ದಂಪತಿ ಸಂತಾನಕ್ಕಾಗಿ ಅರಸುವ ದಾರಿ ! ಇಲ್ಲಿ ಸ್ತೂಲವಾಗಿ ' ವಂಶವೃಕ್ಷದ ' ಎಳೆಯನ್ನು ಕಾಣಬಹುದು.  ಒಂದು ಹಂತದಲ್ಲಿ ಈ ಪುಸ್ತಕವನ್ನು ಬ್ಯಾನ್ ಮಾಡಬೇಕೆಂಬ ತೀವ್ರ ಒತ್ತಡ ಇದ್ದಿತು. ಇದಕ್ಕೆ ಬೇಸತ್ತ ಪೆರುಮಾಳ್ ಸ್ವಲ್ಪ ಮೆತ್ತಗಾದರು ಮತ್ತು ತಾನು ಇನ್ನು ಮುಂದೆ ಬರೆಯುವುದೇ ಇಲ್ಲವೆಂದು ನೊಂದುಕೊಂಡರು. ನಂತರದ ದಿನಗಳಲ್ಲಿ ತಮ್ಮ ಅಭಿವ್ಯಕ್ತಿಗೆ ಮೇಕೆಯಂತ ನಿರುಪದ್ರವಿ ಪ್ರಾಣಿಯನ್ನು ನೆಚ್ಚಿಕೊಂಡರು. ಇದಕ್ಕೆ ಅವರು ಕೊಟ್ಟ ಕಾರಣ ಹಸು ಪವಿತ್ರ, ಹಂದಿ ಅನಿಷ್ಟ, ಹುಲಿ ದೇವರ ವಾಹನ ಇತರ ಪ್ರಾಣಿಗಳೂ ಸಹ ಒಂದಿಲ್ಲೊಂದು...

"The educational heritage of ancient india ", by sahana singh

  ಇದೊಂದು 82 ಪುಟಗಳ ಪುಟಾಣಿ ಪುಸ್ತಕ. ಆದರೆ ಇದು ಹೊತ್ತುಕೊಂಡ ಜವಾಬ್ದಾರಿ ಬಹಳ ದೊಡ್ಡದು.ಪ್ರಾಚೀನ ಭಾರತದಲ್ಲಿನ ವಿದ್ಯಾಭ್ಯಾಸ ಮತ್ತು ಕಲಿಕೆಯ ಪರಂಪರೆಯನ್ನ ಪರಿಚಯ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ.ಸಾವಿರ ಸಾವಿರ ಪೇಜುಗಳು ಬರೆದರೂ ಕಡಿಮೆಯೇ ಎಂದೆನಿಸಿದ್ದು ಈ ಪುಸ್ತಕವನ್ನು ಓದಿ ಅದರೊಳಗೆ ಕೊಟ್ಟಿದ್ದ reference ಪುಸ್ತಕಗಳ ಪಟ್ಟಿ ನೋಡಿದಮೇಲೆಯೇ.  ಈ ಪುಸ್ತಕಕ್ಕೆ ಇಷ್ಟು ಓದಿಕೊಂಡಿದ್ದಾರೆ ಇದರ ಕರ್ತೃ ಸಹನಾ ಸಿಂಗ್.ಇದು ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಪರಿಚಯಿಸುತ್ತದೆ. ಅದೆಂದರೆ ಶತಮಾನಗಳ ಮುಂಚೆಯೇ ಇದ್ದ ಗುರುಶಿಷ್ಯ ಪರಂಪರೆ, ವಿಶ್ವವಿದ್ಯಾಲಯಗಳು, ಅಲ್ಲಿನ ಲಿಂಗಭೇಧವಿಲ್ಲದ ಮುಕ್ತ ವಾತಾವರಣ, ಗ್ರಂಥಾಲಯಗಳು ಅಲ್ಲಿ ಕಲಿಸಲ್ಪಡುತ್ತಿದ್ದ ವ್ಯಾಕರಣ, ಗಣಿತ, ಕಲೆ, ವ್ಯಾಪಾರ, ತರ್ಕ, ಅರೋಗ್ಯ ಸಂಬಂಧಿ ವಿಷಯಗಳು ನೀಡುತ್ತಿದ್ದ ಪದವಿಗಳು, ಹೆಣ್ಣು ಮಕ್ಕಳಿಗಿದ್ದ ತಮ್ಮನ್ನು ಬೇಕಾದವರನ್ನು ಮದುವೆಯಾಗುವ ಅಥವಾ ಬ್ರಹ್ಮಚಾರಿಗಳಾಗೆ ಇದ್ದು ಜ್ಞಾನಾರ್ಜನೆ ಮುಂದುವರೆಸುವ ಸ್ವಾತಂತ್ರ್ಯ ಇತ್ಯಾದಿ.  ಇಲ್ಲಿ ಪ್ರಸ್ತುತ ಪಾಕಿಸ್ತಾನದ ರಾವಲಪಿಂಡಿಯಲ್ಲಿ ದ್ವಂಸವಾಗಿರುವ ತಕ್ಷಶಿಲಾ ವಿಶ್ವವಿದ್ಯಾಲಯದ ಅದರ ಹಿಂದಿನ ವೈಭವದ ಬಗೆಗಿನ ವಿಸ್ತೃತ ವಿವರಣೆಯಿದೆ. ಅದರ ನಂತರ ಬಿಹಾರದ ನಳಂದಾ, ವಿಕ್ರಮಶೀಲ ಕಾಶ್ಮೀರದ ಶಾರದಾ ಕಂಚಿಯ ವಿಶ್ವವಿದ್ಯಾಲಯಗಳು ಇವುಗಳ ನಡುವಿದ್ದ ಪೈಪೋಟಿ ಅವು ಶಿಕ್ಷಕ ಮತ್ತು ಛಾತ್ರರನ್ನು ಸೆಳೆಯಲು ಮ...

Naavalla !

Sethuram Sn ‘ ನಾವಲ್ಲ ‘ ಇದು ಇಂದಿನ ಮತ್ತು ಎಂದಿನ     ಸಮಸ್ಯೆ ! ಮಾಡುವುದನ್ನೆಲ್ಲಾ ಮಾಡಿ ಆಡುವುದನ್ನೆಲ್ಲಾ ಆಡಿ ಮತ್ಯಾರನ್ನೋ ದೋಷಿಸಿ ನಾವು ಪಲಾಯನಗೊಳ್ಳುವುದು ! S N ಸೇತುರಾಂ ಅದ್ಭುತ ವಾಗ್ಮಿ ಮತ್ತು ತಮ್ಮದೇ ಆದ ವಿಶೇಷ ರೆಂಡರಿಂಗ್ ಇರುವವರು. ಅವರ ಧಾರಾವಾಹಿಗಳನ್ನು ನೋಡಿರುವವರಿಗೆ ಈ ಕಥೆಗಳನ್ನು ಓದುವಾಗ ಅವರ ರೆಂಡರಿಂಗ್ ಅಥವಾ “ ಡೈಲಾಗ್ ಡೆಲಿವರಿ “ ಯ ಛಾಯೆ ಬಿಡದಿರದು ! ನಾನೂ ಈ ಎಲ್ಲಾ ಕಥೆಗಳನ್ನೂ ಹಾಗೆಯೇ ಓದಿದ್ದು ! ಹೆಣ್ಣಿನ ಬದುಕನ್ನು ಗಂಡಿನ ಕುಹಕನ್ನು ಏಕ ಕಾಲದಲ್ಲಿ ಅಭಿವ್ಯಕ್ತಿಗೊಳಿಸುವ ಇಲ್ಲಿನ          “ ಮೌನಿ, ಸ್ಮಾರಕ , ಕಾತ್ಯಾಯಿನಿ “ ಮುಂತಾದ ಕಥೆಗಳು ಓದುಗನನ್ನು ಕಂಗಾಲಾಗಿಸುತ್ತವೆ ಅಥವಾ ನಿಷ್ಟೂರವಾಗಿ ಹೇಳಬೇಕೆಂದರೆ ಬೆತ್ತಲುಗೊಳಿಸುತ್ತವೆ!  ಅದರಲ್ಲೂ ಓದುಗ ಗಂಡಾಗಿದ್ದರೆ ಕೆನ್ನೆಯ ಮೇಲೊಂದು ಬಾರಿಸುತ್ತದೆ ! ‘ ಮೋಕ್ಷ ‘ ಕಥೆಯಲ್ಲಿ ದಾರಿ ತೋರುವವನೇ ಅಥವಾ ಹಾಗೆಂದು ನಂಬಿಸಿ ಪೀಠದಲ್ಲಿ ಕೂರಿಸಿದವನೇ ತನ್ನ ಮೋಕ್ಷಕ್ಕೆ ತಿಕ್ಕಾಡಿ ಕಡೆಗದನ್ನು ಹೋರಾಟ ಮಾಡಿ ಪಡೆದುಕೊಂಡು ತನ್ನನ್ನು ನಂಬಿದವರನ್ನೆಲ್ಲ ಧಿಗ್ಬ್ರಮೆ ಗೊಳಿಸುವುದು ಅರ್ಥವತ್ತಾಗಿದೆ ! ‘ ಸಂಭವಾಮಿ’  ಕಥೆಯು ಮೂರೂ ಬಿಟ್ಟವರು ಧರೆಗೆ ದೊಡ್ಡವರು ಎಂಬುದನ್ನು ಸಾರುತ್ತಲ್ಲೇ ಮನುಷ್ಯನ ಖಿಲಾಡಿತನವನ್ನು ಬುದ್ಧಿವಂತಿಕೆಯನ್ನು ಒಂದು ಕಡೆ ಇಟ್ಟು  ಧರ್ಮ  ಕರ...

Love and loans !

Two lives truly EXTRAVAGANT !  One for LOVE and another for LOANS !

L

ಕವಿಯೊಬ್ಬನ ಸ್ವಗತ ಹೇಗಿರಬಹುದು ? ಕವಿಗಳೆಲ್ಲಾ ಭಾವ ಜೀವಿಗಳಾ ?  ಕವಿತೆ ಪ್ರತಿಭೆಯ ಕೂಸೋ ಅಥವಾ ತಲೆಬಗ್ಗಿಸಿ ಶ್ರಮ ವಹಿಸಿ ಬರೆವ ಸ್ಕಿಲ್ಲೋ ? ಕವಿಯದ್ದು ಧ್ಯಾನಸ್ಥ ಸ್ಥಿತಿಯೋ ತ್ರಿಶಂಕುನೊ ? ಕವಿ ಏನೂ ಹೇಳದೆ ಎಲ್ಲವನ್ನೂ ಹೇಳಿಬಿಟ್ಟಹಾಗೆ ಪೋಸು ಕೊಡುವ ಪಲಾಯನವಾದಿಯಾ ? ಕವಿ ಸೂಕ್ಷ್ಮ ಮನಸ್ಸಿನವನಾಗಿರುವುದರಿಂದ ಅವನಿಗೆ ವ್ಯಾಪಾರಿ  ಸೂಕ್ಷ್ಮಗಳು ತಿಳಿದು ಅದನ್ನು ಅವನು ತನ್ನನ್ನು ಎಸ್ಟಾಬಲಿಷ್ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನಾ ? L  ಕಾದಂಬರಿ ಓದಿದಾಗ ಹೀಗೆಲ್ಲಾ ಅನ್ನಿಸಿತು. ಕವಿ ನಿಜಕ್ಕೂ ಒಬ್ಬಂಟಿ ಅನ್ನುವ ಅನುಮಾನಗಳು ಗಟ್ಟಿಯಾಗ ತೊಡಗಿದವು! ಯಾಕೋ ರಾಘವೇಂದ್ರ ಖಾಸನೀಸರ “ ತಬ್ಬಲಿಗಳು “ ಕಥೆ ನೆನಪಾಗತೊಡಗಿತು “ಜಾನಕಿ ಕಾಲಂ “ ನೆನಪಾಯಿತು. ಆದಿ ಇರದ ಅಂತ್ಯವಿರದ ಅಸಂಖ್ಯ ಪ್ರಶ್ನೆಗಳು ಮೈಗೆ  ಹತ್ತಿಕೊಂಡಿತು !

ಬಂಗಾರದ ಮನುಷ್ಯರು

ತಮ್ಮ ಊರಿನ ಮೇಲಿನ ಅಗಾಧ ಪ್ರೀತಿ ಮತ್ತು ಕಾರ್ಮಿಕರ ಮೇಲಿನ ಕಾಳಜಿ ಇರದೇ ಇಂತಹ ಪುಸ್ತಕವನ್ನು ಖಂಡಿತಾ ಬರೆಯಲಾಗುತ್ತಿರಲಿಲ್ಲ. ಹಲವು ಕಡೆ R K ಯವರ ಬರವಣಿಗೆ ಧಮನಿತರ ಕಾವ್ಯದಂತೆ ಅನ್ನಿಸುತ್ತದೆ. ಅಲ್ಲಿ ನೋವು ಬೆವರು ಕಣ್ಣೀರು ಮತ್ತು ನೆತ್ತರುಗಳೇ ರೂಪಕವಾಗಿವೆ ! ಅವರು ಈ ಪುಸ್ತಕ ಬರೆಯದೇ ಹೋಗಿದ್ದರೆ KGF ಗೆ ಮಹಾತ್ಮ ಗಾಂಧಿ ಬಂದದ್ದು ಮತ್ತು ಕಾರ್ಮಿಕರ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಿದ್ದು , ಅಂಬೇಡ್ಕರ್ರವರು ಬಂದು ಗಣಿ ಕೆಲಸಗಾರರ ಕೂಲಿ ಹೆಚ್ಚಳ ಹೋರಾಟದಲ್ಲಿ ಭಾಗವಹಿಸಿ ಅವರನ್ನು ಹುರಿದುಂಬಿಸಿದ್ದು ನಮಗೆ ಹೇಗೆ ತಿಳಿಯಬೇಕಿತ್ತು ? ತಿಂಗಳಿಗೆ ನೂರು ರೂಪಾಯಿ ಹೆಚ್ಚು ಸಂಬಳಕ್ಕೆ ಗಣಿಯಾಳಕ್ಕೆ ಇಳಿವ ಸಾಹಸಮಾಡುವ ಕಾರ್ಮಿಕನ ಮನಸ್ಸು ಮತ್ತು ಪರಿಸ್ಥಿತಿ ಹೇಗಿರಬಹುದು ? ಇನ್ನು ನೂರು ವರ್ಷಗಳ ಕಾಲ ಕೋಲಾರದ ಗಣಿಯಲ್ಲಿ ಸಮೃದ್ಧವಾಗಿ ಗಣಿಗಾರಿಕೆ ಮಾಡಬಹುದು ಎನ್ನುವ ಎಲ್ಲ ವರದಿಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಮತ್ತು KGF  ನ ಅಷ್ಟೂ ಜಾಗವನ್ನು ಪರಭಾರೆ ಮಾಡಲು ಹೊರಡುವುದು, ಇವೆಲ್ಲ ನೋಡಿದಾಗ ಇದೆಲ್ಲ ಒಂದು ಸಂಕೀರ್ಣ ವಿಷ ಕೂಪದಂತೆ ಕಾಣುತ್ತದೆ !