Skip to main content

Posts

Showing posts from August, 2024

Ravi Belagere

Some books only he had the audacity to write and make readers digest and that goes to him as well ! 

‘ಫೂ’ ಕಥಾ ಸಂಕಲನದ ಬಗೆಗಿನ ಅನಿಸಿಕೆ

ಮಂಜುನಾಯಾಕರೇ ನಿಮ್ಮ ‘ಫೂ’ ಸಂಕಲನದಲ್ಲಿ ಇನ್ನಷ್ಟು ಕಥೆಗಳಿರಬಾರದಾ ಎನ್ನಿಸುವಷ್ಟು ಖುಷಿಯಾಯ್ತು ಓದಿ.  ಇದು ಓದಿಗಿಂತಾ ಒಂದು ಅನುಭೂತಿ …ಕೆಲವೇ ಕೆಲವು ಬರಹಗಾರರಲ್ಲಿ ಮತ್ತು ಕೆಲವು ಬರಹಗಳಲ್ಲಿ ಇರುವ ದ್ರವ್ಯ. ‘ಪಾತಿ’ ಎಂಬ ಚಂದದ, ಮನಕಲುಕುವ, ಮುಗ್ದ, ಹಸಿ ಬಿಸಿ  ಪ್ರೇಮ ಕಥೆಯನ್ನು ಹೊರತು ಪಡಿಸಿದರೆ ಮತ್ತೆಲ್ಲ ಕಥೆಗಳಲ್ಲೂ ಒಂದನ್ನೊಂದು ಬೆಸೆಯುವ ಅಂಶ ಇದೆ ಅನ್ನಿಸಿತು. ಅದು ಮುಖ್ಯವಾಗಿ ಪಾತ್ರಗಳ ಜೀವನದ ‘ಹುಡುಕಾಟದಲ್ಲಿ’, ತಹತಹಿಕೆಯಲ್ಲಿ ಕಾಣಿಸುತ್ತದೆ….’ಪಾತಿ’ ಯಲ್ಲಿ ಪ್ರೇಮ ಮತ್ತು ಸಲ್ಲಾಪಗಳು ಬಹುಷ ಅದನ್ನು ಮರೆಮಾಚಿರಬಹುದು !  ವಜ್ರಮುನಿಯ ಬಂಕಿನ (ಕೊಟ್ಟಿಗೆ ಮನೆಯ)ಆಧ್ಯಾತ್ಮ,ಏಕಕಾಲಕ್ಕೆ ಲೌಕಿಕವೂ- ಅಲೌಕಿಕವೂ ಪ್ರಸ್ತುತ - ಅಪ್ರಸ್ತುತ ಎಲ್ಲವೂ ಆಗಬಹುದು, ಹಾಗೆಯೇ ಅಪ್ಪ ಮತ್ತು ಮಗನನ್ನು ಬೆಸೆಯುವ ಕೊಂಡಿಯೂ ಆಗಿರಬಹುದು. “ಮಿಂಚು ಹುಳದಲ್ಲಿ“ ಬರುವ ಹುಡುಗನನ್ನು ಕಾಡುವ, ವಿಚಿತ್ರ ತಳಮಳವನ್ನ, ಹೇಳಿಕೊಳ್ಳಲಾಗದ, ಸುಮ್ಮನಿರಲಾಗದ, ಪರಿಹರಿಸಿಕೊಳ್ಳಲಾಗದ, ಸ್ಪಷ್ಟವಾಗಿ ಬರೆಯಲೂ ಸಾಧ್ಯವಾಗದ….ಒಟ್ಟಿನಲ್ಲಿ ಇಲ್ಲಿನ ಮಿಂಚುಹುಳುವಿನ ಸಂಕೇತವೇ  ಓದುಗನಿಗೆ ಬೆಳಕಲ್ಲದ ಆದರೆ ಕತ್ತಲೂ ಅಲ್ಲದ ಪರಿಸ್ಥಿತಿಯನ್ನ ದಾಟಿಸುವ ಸಮರ್ಥ ಬಳಕೆ ಅಂತ ಅನ್ನಿಸಿತು. ಇಲ್ಲೇ ‘ಕಥೆ’ ಭಾವ- ಬುದ್ಧಿಯನ್ನು ಮೀರಿ ಆದರಾಚೆಗಿನ ಅನುಭೂತಿಯನ್ನು ಮುಟ್ಟುವುದು ಅನ್ನಿಸುತ್ತದೆ.  “ಖತಲ್ ರಾತ್ರಿ” ನಮ್ಮೂರಿನ ಮೊಹರಂ ಆಚರಣೆಯನ್ನು...

ನಿರ್ಗಮನ - ಜೋಗಿ

 ಪ್ರಿಯ ಜೋಗಿಸರ್  ನಿಮ್ಮ ನಿರ್ಗಮನ ಕಾದಂಬರಿಯ ಮೊದಲ ಕೆಲವು ಅಧ್ಯಾಯಗಳನ್ನು ಓದಿದ ಮೇಲೆ ಅದು ಮುಂದೆ ನನನ್ನು ಆಳವಾದ ಆತ್ಮವಿಮರ್ಶೆಗೆ ತಳ್ಳಬಹುದು ಅಂದುಕೊoದಿಡ್ಡೆ ಮತ್ತು ಕೊಂಚ ಹೆದರಿದ್ದೆ ಕೂಡ. ಆದರೆ ಹಾಗಾಗಲಿಲ್ಲ !  ನೀವು ಸುಮ್ಮನೆ ರೋಚಕತೆಗಾಗಿ ತಿರುವುಗಳನ್ನು ನೀಡಿಲ್ಲ. ಒಂದು ಅರ್ಬನ್ ಸಂಸಾರದಲ್ಲಿ ಏಕತಾನತೆಯಲ್ಲಿ ಕಳೆದುಹೋಗಿ ಅದು ನಮಗರಿವಿಲ್ಲದೇ ಸಹಜ ಜೀವನೋಪಾಯದಲ್ಲಿ ಬೆರೆತುಹೋಗುವ ಇಂದಿನ ಪರಿಸ್ಥಿತಿಯನ್ನು ಮೊದಲಾರ್ಧದಲ್ಲಿ ಬಹು ಚೆನ್ನಾಗಿ ಹೊರತಂದಿದ್ದೀರಿ. ಇದು ನಮ್ಮ ಸುತ್ತಲೇ ನಮ್ಮ ಜೊತೆಯೇ ಕೆಲಸ ಮಾಡುವವರ , ನಮ್ಮವರ ಜೀವನದ ಲವಶೇಷದ ಬಗ್ಗೆಯೂ ignorant ಆಗಿರುವ ನಮ್ಮಗಳ ಆಸಕ್ತಿ ಮತ್ತು priority ಗಳಬಗ್ಗೆ ಛೇಡಿಸುತ್ತದೆ. ಆ ವ್ಯಕ್ತಿ ನಮ್ಮ ಅಪ್ಪನೇ ಆದರೆ ?  ಇಲ್ಲಿಗೆ ತಂದು ನಿಲ್ಲಿಸುವಾಗ ಹೊಟ್ಟೆಯಲ್ಲಿ ಸಂಕಟ ಶುರುವಾಗುತ್ತದೆ. ನಮ್ಮ ಅಪ್ಪಂದಿರ ನೋವುಗಳು, ಹತಾಶೆ, ನಮ್ಮ ಬಗೆಗಿನ ಧೋರಣೆ ಇತ್ಯಾದಿ ವಿಷಯಗಳು ನಮ್ಮ ನಡಾವಳಿಗೆ ಹಿಡಿದ ಕನ್ನಡಿಯಾಗಿ ಅದರೊಳಗಿನ ಗಂಟಾಗಿ ಕೆಲವೊಮ್ಮೆ ಅಣಕಿಸುವ ಭೂತವೂ / ಪ್ರತಿಫಲನವೂ ಆಗಬಹುದು !  ಆದರೆ ನೀವು ನಮ್ಮನು ಅಲ್ಲಿಗೆ ನೂಕಿಲ್ಲ ಸಧ್ಯ ! ನೂಕಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ. ಯಾಕೋ ಅಪ್ಪನ ಐಡೆಂಟಿಟಿ ಜನಪ್ರಿಯ ತೆಲುಗು ಸಿನಿಮಾ ಒಂದರ ಜಾಡು ಹಿಡಿದು ಅತ್ತಲೇ ಹೋಯಿತು ….ಇದು ನನಗೆ ಅಷ್ಟು ಕುಷಿ ಕೊಡಲಿಲ್ಲ. ಅಪ್ಪ ನಮ್ಮನ್ನು ಮತ್ತಷ್ಟು ಕಲಕಬೇಕ...

ನನ್ನಿಷ್ಟ - Ram Gopal Varma

 ಒಮ್ಮೆ ನನ್ನ ಕವನ ಸಂಕಲನಕ್ಕೆ ಸೃಜನ್ ಸರ್ ಚಿತ್ರಗಳನ್ನು ಬರೆದುಕೊಟ್ಟಿದ್ದರು. ನಾನು ಕ್ರೆಡಿಟ್ಸ್ ನಲ್ಲಿ ಅದನ್ನು caricatures ಅಂತ ಹಾಕಿದ್ದೆ. ಅದಕ್ಕೆ ಅವರು ಇವು illustrations ಅಲ್ವಾ ದರ್ಶನ್ ಅಂದರು. ನನಗೂ ಅದು ಸರಿ ಅನ್ನಿಸಿ ಹಾಗೆಯೇ ಬದಲಾಯಿಸಿದೆ.  ಈ ಮಾತು ಈಗ ಯಾಕೆಂದರೆ ಅವರು ನನಗೆ ಪ್ರೀತಿಯಿಂದ ಕಳಿಸಿದ ರಾಮ್ ಗೋಪಾಲ್ ವರ್ಮಾನ “ ನನ್ನಿಷ್ಟ” ಪುಸ್ತಕದ ಕನ್ನಡ ಅನುವಾದ ಓದಿದಮೇಲೆ , ಸರಳವಾಗಿ ಕ್ಯಾರಿಕೇಚರ್  ಆಗಿಬಿಡಬಹುದಾಗಿದ್ದ ಆತನ, ಅಥವಾ ಹಲವು ಜನ ತಪ್ಪು ತಿಳಿದಿರುವ ಆತನ ವ್ಯಕ್ತಿತ್ವದ ಮಜಲುಗಳನ್ನು ತಿಳಿಸುವ ಈ ಪುಸ್ತಕ ಅವನ ಆಲೋಚನೆಗಳನ್ನು illustrate ಮಾಡಿದೆ.  ಇದನ್ನು ಸೃಜನ್ರವರು ತೆಲುಗರ ನಾಡಿಮಿಡಿತ ಬಲ್ಲವರಾಗಿ, ಭಾಷೆ ಬಲ್ಲವರಾಗಿ, ಸಿನಿಮಾ ಸಾಹಿತ್ಯ ಮತ್ತು ಕಲೆಯ ಬಗ್ಗೆ ಆಸ್ಥೆ, ಆಸಕ್ತಿ ಉಳ್ಳವರಾಗಿ, ಸ್ವತಃ ಕಲಾವಿದರಾಗಿರುವುದರಿಂದ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಮು ಸ್ವತಃ ಪಕ್ಕ ಕುಂತು ವಿವರಿಸಿರುವ ಹಾಗಿದೆ ಹಲವು ಅಧ್ಯಾಯಗಳು.  ಆತನ ವಿಕ್ಷಿಪ್ತತೆ, ತರಲೆ, ಕ್ರೈಂ instinct, ಚಿತ್ರಕಥಾ ಶೈಲಿ, ಜೀವನದ ಫಿಲಾಸಫಿ, ಪ್ರತಿಭೆ, ನೇರವಂತಿಕೆ, ಅಹಂ, ತನ್ನ ಮೇಲಿನ ಹಿಡಿತ (?), ರೀಚ್, ಶಿಷ್ಯಂದಿರು ಮತ್ತವರ ಪ್ರತಿಭೆ, ಜಾಗತಿಕ ಸಿನಿಮಾದ ಜ್ಞಾನ, voracious ಓದು ಮತ್ತು ಬರವಣಿಗೆ, ಕಥೆ ಕಟ್ಟುವ ಬಗೆ, ಜೀವನವನ್ನು ಅದರಲ್ಲೂ ಮನುಷ್ಯರನ್ನು ನೋಡುವ ಬಗೆ, ತುಡಿತ, ಕ್ರಿಯಾ...

ನವಿಲು ಕೊಂದ ಹುಡುಗ

 ಮಾನವ ಇತಿಹಾಸದಲ್ಲಿ ಎಷ್ಟೊಂದು ಪ್ರಳಯವಾಗಿದೆ ಸ್ತ್ರೀ ಪ್ರೇಮ ಪುರುಷ ಭಾಗ್ಯ ಕಾದು ಕಾದು ಮಾಗಿದೆ  ( ದ ರಾ ಬೇಂದ್ರೆ)  ಇಲ್ಲಿನ ಕಥೆಗಳನ್ನು ಓದಿದಾಗ ನನಗೆ ಥಟ್ ಅಂತ ನೆನಪಿಗೆ ಬಂದ ಸಾಲುಗಳಿವು. ಆರಂಭದ ‘ಬಿಡುಗಡೆ’ ಕಥೆ ಯೊಂದನ್ನು ಬಿಟ್ಟರೆ ಇಲ್ಲಿನ ಎಲ್ಲ ಕಥೆಗಳೂ ಪ್ರೇಮದ ಸೋಂಕಿನಿಂದ ಅರಳಿವೆ. ಕಾಡು, ಮಳೆ, ನಿರ್ಜನ ಹಾದಿ, ಮೌನ ಭಗ್ನ ಪ್ರೇಮಕ್ಕೆ ಸೂಕ್ತವಾದ ಭೂಮಿಕೆ. ಸಚಿನ್ ಇಲ್ಲಿನ ಪ್ರತಿ ಕಥೆಯಲೂ ಒಂದಷ್ಟನ್ನು ಹೇಳಿ ಮತ್ತೊಂದಷ್ಟನ್ನು ನಮ್ಮ imagination ಗೆ ಬಿಟ್ಟಿದ್ದಾರೆ. ಆದರೆ ಈ ಊಹೆ ತಲೆಗೆ ಹುಳುಬಿಡುವ ಹಾಗಿರದೇ ಸರಳವಾಗಿ ಓದುಗನಿಗೆ ಒಂದು ರೀತಿ ಮಜಾ ಕೊಡುತ್ತವೆ. ಇಲ್ಲಿನ ಕಾಡುವ ಪ್ರೇಮಕಥೆಗಳನ್ನ ಸಿನಿಮಾ ಮಾಡಬಹುದಾ ಅಂತ ಯೋಚಿಸುತ್ತೇನೆ. ಆದರೆ ಯಾಕೋ ಆಗ ಇಲ್ಲಿನ ಪಾತ್ರಗಳು ಸತ್ತುಹೋಗುತ್ತವೆ ಅನ್ನಿಸುತ್ತದೆ.  ಕಥೆಗಳಿಗಾಗಿಯೇ ಒಂದು ಸ್ಪೇಸ್ ಇದೆ, ಅದರಲ್ಲೂ ಭಗ್ನ ಪ್ರೇಮ ಕಥೆಗಳಿಗೆ - ಸಚಿನ್ ಅದನ್ನು ತುಂಬಬಲ್ಲ ಅತ್ಯಂತ ಸಮರ್ಥ ಕಥೆಗಳನ್ನು ಬರೆದಿದ್ದಾರೆ. ಇಲ್ಲಿ ನೋವು, ನಿರಾಕರಣ, ಹರೆಯದ ತುಮುಲಗಳು ಓದುಗನನ್ನು ಕೆಲಕಾಲ ಕಾಡುತ್ತವೆ. ಈ ಕಥೆಯಾದರೂ ಸುಖಾಂತ್ಯ ಆಗಬಾರದ ಎಂದು ತಹತಹಿಸುತ್ತೇನೆ. ಸುಖಾಂತವಾದರೆ ಕಥೆಗಳು ಅದೇ ಸೆಳೆತವನ್ನು ಹಿಡಿದಿಟ್ಟುಕೊಳ್ಳಬಲ್ಲವಾ??? ಅವರ ಮುಂದಿನ ಕಥಾಸಂಕಲನದಲ್ಲಿ ಉತ್ತರ ಸಿಗಬಹುದು …ನೋಡುವ !

ಸಾಸಿವೆ ತಂದವಳು

 ನೋವಿನ ನೆಂಟರು !   ಇತ್ತೀಚೆಗೆ ನನ್ನ ಸುತ್ತಮುತ್ತಲಿನಲ್ಲಿ ಹಲವು ಜನ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುವುದನ್ನ ಕಂಡಿದ್ದೇನೆ. ಅವರಲ್ಲಿ ಹೆಚ್ಚು ಜನ ಮಹಿಳೆಯರೇ ಆಗಿರುವುದು ಬೇಸರದ ಮತ್ತು ಸೋಜಿಗದ ಸಂಗತಿ. ಪುರುಷರು ಹೆಚ್ಚಾಗಿ ಹೃದಯ ಸಂಬಂಧಿ ಕಾರಣಗಳಿಗೆ ಬಲಿಯಾದರೆ ಹೆಣ್ಣುಮಕ್ಕಳು ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ. ನನ್ನ ಅಮ್ಮನ ಅಕ್ಕಂದಿರಲ್ಲಿ ಇಬ್ಬರು ಕ್ಯಾನ್ಸರ್ಗೆ ಬಲಿಯಾದದ್ದರಿಂದ ಮತ್ತು ಅವರು ತೀರಿಕೊಂಡಾಗ ಅವರ ಮಕ್ಕಳುಗಳು ಅಂದರೆ ನನ್ನ ಅಣ್ಣ ಅಕ್ಕಂದಿರು ಪುಟ್ಟಮಕ್ಕಳಾಗಿದ್ದರಿಂದ ಈ ಪುಸ್ತಕ ಹೆಚ್ಚು ಪರ್ಸನಲ್ ಆಗತೊಡಗಿತು. ಇದನ್ನು ಮೊದಲು ಓದಿದ ಅಮ್ಮ ಆಗಾಗ ವಿಷಣ್ಣಳಾಗುತ್ತಿದ್ದಳು, ನಾನೂ ಕಾರಣ ಕೇಳದೆ ಸುಮ್ಮನಿದ್ದೆ . ಸ್ವಲ್ಪ ದಿನಗಳನಂತರ ಪುಸ್ತಕವನ್ನು ಕೈಲಿ ಹಿಡಿದೇ ಆಳುತ್ತಿದ್ದಳು ಆಗ ನನಗೆ ಅವಳು ಅನ್ಯಮನಸ್ಕಳಾಗುತ್ತಿದ್ದುದರ ಕಾರಣ ಹೊಳೆಯಿತು. ಭಾರತಿಯವರು ತಮ್ಮ ಅನುಭವವನ್ನು ಅತ್ಯಂತ ಧೈರ್ಯವಾಗಿ, ನೇರವಾಗಿ, ಜೋವಿಯಲ್ ಆಗಿ ನಿರೂಪಿಸಿದರೂ ನೋವಿನ ಕಥೆಯನ್ನು ಹೇಳುವಾಗ ನೋವನ್ನು ಹೇಗೆ ಮರೆಮಾಚುವುದು? ಅದರಲ್ಲೂ ಇದರ ವೈಯಕ್ತಿಕ ಅನುಭವವಿರುವ ಅಮ್ಮನಂತವರು ಅಲ್ಲಿನ ಲವಲವಿಕೆಯ ವಿಷಯವನ್ನು ಹೆಚ್ಚು ಗಮನಿಸರು. ಆದರೆ ಇದು ಪ್ರಸ್ತುತ ಕ್ಯಾನ್ಸರ್ನಿಂದ ನರಳುತ್ತಿರುವವರು ಮತ್ತವರ ಮನೆಯವರಿಗೆ ಕತ್ತಲನ್ನು ದಾಟಬಹುದಾದ ಒಂದು ಪುಟ್ಟ ಹಣತೆ. ಹಾಗೆಯೇ ಬಳಲುತ್ತಲಿರುವರ ಜೊತೆ ಮನೆಯ ಹೊರಗಿನವರು ಹೇಗೆ ವ್ಯವಹರಿಸಬೇಕ...

The heart of darkness by Joseph Conrad

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

# ನಡುಬಗ್ಗಿಸಿದ ಎದೆಯ ದನಿ #

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...