ಪ್ರಿಯ ಜೋಗಿಸರ್
ನಿಮ್ಮ ನಿರ್ಗಮನ ಕಾದಂಬರಿಯ ಮೊದಲ ಕೆಲವು ಅಧ್ಯಾಯಗಳನ್ನು ಓದಿದ ಮೇಲೆ ಅದು ಮುಂದೆ ನನನ್ನು ಆಳವಾದ ಆತ್ಮವಿಮರ್ಶೆಗೆ ತಳ್ಳಬಹುದು ಅಂದುಕೊoದಿಡ್ಡೆ ಮತ್ತು ಕೊಂಚ ಹೆದರಿದ್ದೆ ಕೂಡ. ಆದರೆ ಹಾಗಾಗಲಿಲ್ಲ !
ನೀವು ಸುಮ್ಮನೆ ರೋಚಕತೆಗಾಗಿ ತಿರುವುಗಳನ್ನು ನೀಡಿಲ್ಲ. ಒಂದು ಅರ್ಬನ್ ಸಂಸಾರದಲ್ಲಿ ಏಕತಾನತೆಯಲ್ಲಿ ಕಳೆದುಹೋಗಿ ಅದು ನಮಗರಿವಿಲ್ಲದೇ ಸಹಜ ಜೀವನೋಪಾಯದಲ್ಲಿ ಬೆರೆತುಹೋಗುವ ಇಂದಿನ ಪರಿಸ್ಥಿತಿಯನ್ನು ಮೊದಲಾರ್ಧದಲ್ಲಿ ಬಹು ಚೆನ್ನಾಗಿ ಹೊರತಂದಿದ್ದೀರಿ. ಇದು ನಮ್ಮ ಸುತ್ತಲೇ ನಮ್ಮ ಜೊತೆಯೇ ಕೆಲಸ ಮಾಡುವವರ , ನಮ್ಮವರ ಜೀವನದ ಲವಶೇಷದ ಬಗ್ಗೆಯೂ ignorant ಆಗಿರುವ ನಮ್ಮಗಳ ಆಸಕ್ತಿ ಮತ್ತು priority ಗಳಬಗ್ಗೆ ಛೇಡಿಸುತ್ತದೆ. ಆ ವ್ಯಕ್ತಿ ನಮ್ಮ ಅಪ್ಪನೇ ಆದರೆ ?
ಇಲ್ಲಿಗೆ ತಂದು ನಿಲ್ಲಿಸುವಾಗ ಹೊಟ್ಟೆಯಲ್ಲಿ ಸಂಕಟ ಶುರುವಾಗುತ್ತದೆ. ನಮ್ಮ ಅಪ್ಪಂದಿರ ನೋವುಗಳು, ಹತಾಶೆ, ನಮ್ಮ ಬಗೆಗಿನ ಧೋರಣೆ ಇತ್ಯಾದಿ ವಿಷಯಗಳು ನಮ್ಮ ನಡಾವಳಿಗೆ ಹಿಡಿದ ಕನ್ನಡಿಯಾಗಿ ಅದರೊಳಗಿನ ಗಂಟಾಗಿ ಕೆಲವೊಮ್ಮೆ ಅಣಕಿಸುವ ಭೂತವೂ / ಪ್ರತಿಫಲನವೂ ಆಗಬಹುದು !
ಆದರೆ ನೀವು ನಮ್ಮನು ಅಲ್ಲಿಗೆ ನೂಕಿಲ್ಲ ಸಧ್ಯ ! ನೂಕಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ. ಯಾಕೋ ಅಪ್ಪನ ಐಡೆಂಟಿಟಿ ಜನಪ್ರಿಯ ತೆಲುಗು ಸಿನಿಮಾ ಒಂದರ ಜಾಡು ಹಿಡಿದು ಅತ್ತಲೇ ಹೋಯಿತು ….ಇದು ನನಗೆ ಅಷ್ಟು ಕುಷಿ ಕೊಡಲಿಲ್ಲ. ಅಪ್ಪ ನಮ್ಮನ್ನು ಮತ್ತಷ್ಟು ಕಲಕಬೇಕಿತ್ತು ‘ ದಂಡನಾಯಕನಾಗಿ’ ಅಲ್ಲ , ‘ ಅಮಾಯಕನಾಗಿಯೂ’ ಅಲ್ಲ ….ಬಹುಷ subtle ಆಗಿ, ಅಮ್ಮನ ಗಂಡನಾಗಿ , ಚಿಕ್ಕಂದಿನಲ್ಲಿ ಮಗನಿಗೆ ಹೆಗಲು ಕೊಟ್ಟ ಆಜಾನುಬಾಹುವಾಗಿ ಇತ್ಯಾದಿ ……
ಇಂತಿ ನಮಸ್ಕಾರಗಳು
ದರ್ಶನ್ ಜಯಣ್ಣ
Comments
Post a Comment