ಮಾನವ ಇತಿಹಾಸದಲ್ಲಿ
ಎಷ್ಟೊಂದು ಪ್ರಳಯವಾಗಿದೆ
ಸ್ತ್ರೀ ಪ್ರೇಮ ಪುರುಷ ಭಾಗ್ಯ
ಕಾದು ಕಾದು ಮಾಗಿದೆ
( ದ ರಾ ಬೇಂದ್ರೆ)
ಇಲ್ಲಿನ ಕಥೆಗಳನ್ನು ಓದಿದಾಗ ನನಗೆ ಥಟ್ ಅಂತ ನೆನಪಿಗೆ ಬಂದ ಸಾಲುಗಳಿವು. ಆರಂಭದ ‘ಬಿಡುಗಡೆ’ ಕಥೆ ಯೊಂದನ್ನು ಬಿಟ್ಟರೆ ಇಲ್ಲಿನ ಎಲ್ಲ ಕಥೆಗಳೂ ಪ್ರೇಮದ ಸೋಂಕಿನಿಂದ ಅರಳಿವೆ. ಕಾಡು, ಮಳೆ, ನಿರ್ಜನ ಹಾದಿ, ಮೌನ ಭಗ್ನ ಪ್ರೇಮಕ್ಕೆ ಸೂಕ್ತವಾದ ಭೂಮಿಕೆ.
ಸಚಿನ್ ಇಲ್ಲಿನ ಪ್ರತಿ ಕಥೆಯಲೂ ಒಂದಷ್ಟನ್ನು ಹೇಳಿ ಮತ್ತೊಂದಷ್ಟನ್ನು ನಮ್ಮ imagination ಗೆ ಬಿಟ್ಟಿದ್ದಾರೆ. ಆದರೆ ಈ ಊಹೆ ತಲೆಗೆ ಹುಳುಬಿಡುವ ಹಾಗಿರದೇ
ಸರಳವಾಗಿ ಓದುಗನಿಗೆ ಒಂದು ರೀತಿ ಮಜಾ ಕೊಡುತ್ತವೆ.
ಇಲ್ಲಿನ ಕಾಡುವ ಪ್ರೇಮಕಥೆಗಳನ್ನ ಸಿನಿಮಾ ಮಾಡಬಹುದಾ ಅಂತ ಯೋಚಿಸುತ್ತೇನೆ. ಆದರೆ ಯಾಕೋ ಆಗ ಇಲ್ಲಿನ ಪಾತ್ರಗಳು ಸತ್ತುಹೋಗುತ್ತವೆ ಅನ್ನಿಸುತ್ತದೆ.
ಕಥೆಗಳಿಗಾಗಿಯೇ ಒಂದು ಸ್ಪೇಸ್ ಇದೆ, ಅದರಲ್ಲೂ ಭಗ್ನ ಪ್ರೇಮ ಕಥೆಗಳಿಗೆ - ಸಚಿನ್ ಅದನ್ನು ತುಂಬಬಲ್ಲ ಅತ್ಯಂತ ಸಮರ್ಥ ಕಥೆಗಳನ್ನು ಬರೆದಿದ್ದಾರೆ. ಇಲ್ಲಿ ನೋವು, ನಿರಾಕರಣ, ಹರೆಯದ ತುಮುಲಗಳು ಓದುಗನನ್ನು ಕೆಲಕಾಲ ಕಾಡುತ್ತವೆ. ಈ ಕಥೆಯಾದರೂ ಸುಖಾಂತ್ಯ ಆಗಬಾರದ ಎಂದು ತಹತಹಿಸುತ್ತೇನೆ. ಸುಖಾಂತವಾದರೆ ಕಥೆಗಳು ಅದೇ ಸೆಳೆತವನ್ನು ಹಿಡಿದಿಟ್ಟುಕೊಳ್ಳಬಲ್ಲವಾ???
ಅವರ ಮುಂದಿನ ಕಥಾಸಂಕಲನದಲ್ಲಿ ಉತ್ತರ ಸಿಗಬಹುದು …ನೋಡುವ !
Comments
Post a Comment