ಒಮ್ಮೆ ನನ್ನ ಕವನ ಸಂಕಲನಕ್ಕೆ ಸೃಜನ್ ಸರ್ ಚಿತ್ರಗಳನ್ನು ಬರೆದುಕೊಟ್ಟಿದ್ದರು. ನಾನು ಕ್ರೆಡಿಟ್ಸ್ ನಲ್ಲಿ ಅದನ್ನು caricatures ಅಂತ ಹಾಕಿದ್ದೆ. ಅದಕ್ಕೆ ಅವರು ಇವು illustrations ಅಲ್ವಾ ದರ್ಶನ್ ಅಂದರು. ನನಗೂ ಅದು ಸರಿ ಅನ್ನಿಸಿ ಹಾಗೆಯೇ ಬದಲಾಯಿಸಿದೆ.
ಈ ಮಾತು ಈಗ ಯಾಕೆಂದರೆ ಅವರು ನನಗೆ ಪ್ರೀತಿಯಿಂದ ಕಳಿಸಿದ ರಾಮ್ ಗೋಪಾಲ್ ವರ್ಮಾನ “ ನನ್ನಿಷ್ಟ” ಪುಸ್ತಕದ ಕನ್ನಡ ಅನುವಾದ ಓದಿದಮೇಲೆ , ಸರಳವಾಗಿ ಕ್ಯಾರಿಕೇಚರ್
ಆಗಿಬಿಡಬಹುದಾಗಿದ್ದ ಆತನ, ಅಥವಾ ಹಲವು ಜನ ತಪ್ಪು ತಿಳಿದಿರುವ ಆತನ ವ್ಯಕ್ತಿತ್ವದ ಮಜಲುಗಳನ್ನು ತಿಳಿಸುವ ಈ ಪುಸ್ತಕ ಅವನ ಆಲೋಚನೆಗಳನ್ನು illustrate ಮಾಡಿದೆ.
ಇದನ್ನು ಸೃಜನ್ರವರು ತೆಲುಗರ ನಾಡಿಮಿಡಿತ ಬಲ್ಲವರಾಗಿ, ಭಾಷೆ ಬಲ್ಲವರಾಗಿ, ಸಿನಿಮಾ ಸಾಹಿತ್ಯ ಮತ್ತು ಕಲೆಯ ಬಗ್ಗೆ ಆಸ್ಥೆ, ಆಸಕ್ತಿ ಉಳ್ಳವರಾಗಿ, ಸ್ವತಃ ಕಲಾವಿದರಾಗಿರುವುದರಿಂದ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಮು ಸ್ವತಃ ಪಕ್ಕ ಕುಂತು ವಿವರಿಸಿರುವ ಹಾಗಿದೆ ಹಲವು ಅಧ್ಯಾಯಗಳು.
ಆತನ ವಿಕ್ಷಿಪ್ತತೆ, ತರಲೆ, ಕ್ರೈಂ instinct, ಚಿತ್ರಕಥಾ ಶೈಲಿ, ಜೀವನದ ಫಿಲಾಸಫಿ, ಪ್ರತಿಭೆ, ನೇರವಂತಿಕೆ, ಅಹಂ, ತನ್ನ ಮೇಲಿನ ಹಿಡಿತ (?), ರೀಚ್, ಶಿಷ್ಯಂದಿರು ಮತ್ತವರ ಪ್ರತಿಭೆ, ಜಾಗತಿಕ ಸಿನಿಮಾದ ಜ್ಞಾನ, voracious ಓದು ಮತ್ತು ಬರವಣಿಗೆ, ಕಥೆ ಕಟ್ಟುವ ಬಗೆ, ಜೀವನವನ್ನು ಅದರಲ್ಲೂ ಮನುಷ್ಯರನ್ನು ನೋಡುವ ಬಗೆ, ತುಡಿತ, ಕ್ರಿಯಾಶೀಲ ಮನಸ್ಸು, self centeredness, ಶ್ರೀದೇವಿಯ ಮತ್ತು ರೈಫಲ್ ಎನ್ನುವ ಹುಡುಗಿಯ ಮೇಲಿನ ಮೋಹ, ಕಿಲಾಡಿತನ, ಸಣ್ಣತನ ….ಇನ್ನಷ್ಟು ಆತನ ಬದುಕಿನ ಒಳಹೊರಗಿನ ಬಗ್ಗೆ ತಿಳಿಯಬೇಕೆಂದರೆ ಈ ಪುಸ್ತಕವನ್ನು ಅಗತ್ಯವಾಗಿ ಓದಿ.
ಸೃಜನ್ ಸರ್ ಮತ್ತೊಮ್ಮೆ ಪುಸ್ತಕ ಕಳಿಸಿದ್ದಕ್ಕೆ ಧನ್ಯವಾದಗಳು 😊👍🏼
Comments
Post a Comment