ನಾನು ಗ್ರೇಟಾ ಥನ್ಬರ್ಗ್ ಅಭಿಮಾನಿಯಲ್ಲ. ಆದರೆ ಅವಳ ಹಲವು ಮಾತುಗಳನ್ನು ಕೇಳಿದ್ದೇನೆ. ನನ್ನ ಫೀಲ್ಡ್ ಆಫ್ ಸ್ಟಡಿ ಕೂಡ ಆಗಿರುವುದರಿಂದ ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಏರಿಕೆ ( ಅಥವಾ ಹೇರಿಕೆ !) ಯ ಬಗ್ಗೆ ಸಿಗುವುದೆಲ್ಲವನ್ನೂ ಓದುತ್ತಾ ಇರುತ್ತೇನೆ. ಇದು ನನ್ನ ಕೆಲಸ ಮತ್ತು ಹವ್ಯಾಸ ಎರಡೂ ಆಗಿದೆ.
ಇತ್ತೀಚೆಗೆ ಈಕೆ ಹಲವಾರು ಜಾಗತಿಕ ವೇದಿಕೆಗಳಲ್ಲಿ 2019 ರ ಆಸುಪಾಸಿನಲ್ಲಿ ಮಾಡಿದ ಹಲವು ಭಾಷಣಗಳ ಪುಸ್ತಕ ರೂಪವನ್ನು ಓದಿದೆ. ಆಕೆ ಹೇಳುವ ವಿಜ್ಞಾನ ವಿವರಗಳು ನಿರ್ವಿವಾದ ಆದರೆ “ ನೀವು ದೊಡ್ಡವರು ಹಾಳು ಮಾಡಿದ್ದೀರಿ ಅದರಿಂದಾ ನಾವು ಎಳೆಯರು ಶಾಲೆ ಬಿಟ್ಟು ಬೀದಿಗೆ ಬೀಳುವಂತಾಗಿದೆ ! “ , “ ನಿಮಗೆ ಲಾಭ ಮಾತ್ರ ಮುಖ್ಯ, ಸುಮ್ಮನೆ ಕಣ್ಣೊರೆಸುವ ತಂತ್ರ ಮಾಡುತ್ತಿರಿ “ , “ you are not panicking, the world is burning and how dare you call us alarmists “ , “ how dare you to steal our childhood “ ಹೀಗೆ ಪಂಕಾನುಪುಂಕವಾಗಿ ಡ್ರಾಮಾಟಿಕ್ ಆಗಿ ಹೇಳುತ್ತಾ ಹೋಗುತ್ತಾಳೆ ಇದು ಕೆಲವರಿಗೆ ಇಷ್ಟವಾಗಿ , ಹಲವರಿಗೆ ಕಿರಿಕಿರಿಯುಂಟು ಮಾಡುತ್ತದೆ!
ಅದೆಲ್ಲಾ ಒತ್ತಟ್ಟಿಗಿಟ್ಟು ಬರಿಯ ಅಂಕಿ ಅಂಶಗಳನ್ನ ನೋಡುವುದಾದರೆ ಆಕೆ ಕ್ಲಿಷ್ಟವಾದ ಅಂಶಗಳನ್ನು ಸರಳವಾಗಿ ವಿವರಿಸುವ ಜಾಣ್ಮೆ ಹೊಂದಿದ್ದಾಳೆ. ಅದಕ್ಕೆ ಅವಳ ಹೆತ್ತವರು, ಶಿಕ್ಷಕರು, ಹಲವು ಪತ್ರಕರ್ತರು ಮತ್ತು ವಿಜ್ಞಾನಿಗಳು ಬೆಂಬಲವಾಗಿದ್ದಾರೆ …ಇದು ಇವತ್ತಿನ ಜರೂರತ್ತು . ಆಕೆಗೆ ಸೂಕ್ಷ್ಮಗಳು, ಜಾಗತಿಕ ರಾಜಕೀಯ, ಈಕ್ವಿಟಿ ( ಸಮತೆ) ಇವೆಲ್ಲ ಗೊತ್ತಿಲ್ಲ ಎಂದು ಹಲುಬುವುದರಲ್ಲಿ ಅರ್ಥವಿಲ್ಲ ಏಕೆಂದರೆ 15 ರ ವಯಸ್ಸು ಆ ಮಟ್ಟಿಗಿನ ಪಕ್ವತೆ ಹೊಂದಿರಲ್ಲ. ಆದರೆ ಅವಳ ಹೋರಾಟ, ಕಮಿಟ್ಮೆಂಟ್ಟ್ , ಸಾಹಸ ಮತ್ತು ಪರಿಶ್ರಮದ ಬಗ್ಗೆ ಎರಡು ಮಾತಿಲ್ಲ !
ನಾಗೇಶ್ ಹೆಗ್ಡೆಯವರು ಜಾಗತಿಕ ತಾಪಮಾನ ಏರಿಕೆ ಯನ್ನು “ ಭೂ ಜ್ವರ” ಅನ್ನುತ್ತಾರೆ , ನಮ್ಮ ವಿಜ್ಞಾನ ಸಂವಹನ ಇಷ್ಟು ಸರಳವಾದರೆ ಎಷ್ಟು ಸೊಗಸು ?
Comments
Post a Comment