ಈ ಪುಸ್ತಕ ಅನಂತ ನಡೆದು ಬಂದ ಹಾದಿಯ ಸಂಕ್ಷಿಪ್ತ ಕಥನ. ಕೆಲವೆಡೆ ಭಾರವಾಗಿ, ಹಲವೆಡೆ ಹಗುರವಾಗಿ ಸಾಗುವ ಇದು ಯುವ ಬರಹಗಾರನೊಬ್ಬನ ಪ್ರಾಮಾಣಿಕ ಬಿನ್ನಹ.
ಮೊದಲು ತನ್ನ ಬಗ್ಗೆ, ನಂತರ ತನ್ನವರ ಬಗ್ಗೆ, ಕಡೆಯಲ್ಲಿ ತಾನು ಮತ್ತು ಪುಸ್ತಕಗಳ ಬಗ್ಗೆ ಬರೆದಿರುವ ಅಧ್ಯಾಯಗಳಲ್ಲಿ ಹಲವು ಸರಳ ಅನಿಸುವ, ನಮ್ಮದೂ ನಿಮ್ಮದು ಅನ್ನಿಸುವ ಆಗಿರಲೂ ಬಹುದಾದ ವಿಷಯಗಳಿವೆ. ಇವುಗಳಲ್ಲಿ ಅಪ್ಪ, ಅಮ್ಮ, ಗೆಳೆಯ, ಗೆಳತಿ, ಅಣ್ಣ, ಸಮಾಜ, ಶಾಲೆ, ಮಾಸ್ತರು, ಸಿನಿಮಾ, ನಾಟಕ ಎಲ್ಲ ಇಣುಕುತ್ತವೆ.
ಕಡೆಯ ಮತ್ತು ಪುಸ್ತಕಗಳ ಬಗೆಗಿನ ಅಧ್ಯಾಯಗಳಲ್ಲಿ ನಮಗೆ ಒಬ್ಬ mature ಆದ ಬರಹಗಾರನೊಬ್ಬ ಕಾಣಸಿಗುತ್ತಾನೆ. ಅಲ್ಲಿ ಕಥೆ ಕಮ್ಮಿಯಾಗಿ ಪುಸ್ತಕಗಳನ್ನು ಹೊರತರುವ, ಮಾರುವ ಸ್ವಂತ ಅನುಭವದ ವಿಚಾರಗಳು ಗಮನ ಸೆಳೆಯುತ್ತವೆ.
೨೭ ವರ್ಷಕ್ಕೆ ಈತನಿಗೆ ಇಷ್ಟು ತಿಳುವಳಿಕೆ, ಸಂಘಟನಾ ಸಾಮರ್ಥ್ಯ ಇರುವುದು ಕುಶಿಯ ಸಂಗತಿ. ಆದರೂ ಆತನಿಗಿಂತಾ ೧೨ ವರ್ಷಕ್ಕೆ ಹಳಬನಾಗಿ ನಾನು ಹೇಳುವ ಮಾತು, ಪ್ರಕಟಣೆಯಲ್ಲಿ ಸ್ವಲ್ಪ ಬಿಗಿಯಿರಲಿ !
Comments
Post a Comment