ಈ ಪುಸ್ತಕ ಬಿತ್ತಿಪತ್ರದ ಮಾದರಿಯದ್ದು.
ಆದರೆ ಇದು ಎತ್ತುವ ಪ್ರಶ್ನೆಗಳು RSS ನ ಪೂರ್ವ ಸೂರಿಗಳಾದ ಗೋಲ್ವಾಳ್ಕರ್, ಹೆಡಗೇವಾರ್, ಸಾವರ್ಕರ್ ಗಳೇ ಮೊದಲಾದವರ ಪುಸ್ತಕಗಳಿಂದ, ವಿಚಾರ ಮತ್ತು ಭಾಷಣಗಳಿಂದ ಹೊಮ್ಮಿದ್ದು.
ಪ್ರಗತಿಪರರ ಯಾವತ್ತಿನ ತಕರಾರುಗಳಾದ ಚಾತುರ್ವರ್ಣ ಪದ್ಧತಿ, ಮನುಸ್ಮೃತಿ, ಶ್ರೇಣಿಕೃತ ಸಮಾಜ ಇವೇ ಮುಂತಾದ ವಿಚಾರಗಳು ಇಲ್ಲಿ ಚರ್ಚೆಯಾಗಿವೆ. ಅದರ ಜೊತೆಗೆ ಹೋರಾಟಗಳ ಇಂದಿನ ಸವಾಲುಗಳು ಮತ್ತು ಅವು ಸವಕಲಾಗುತ್ತಿರುವುದರ ಬಗ್ಗೆಯೂ ಜಿಜ್ಞಾಸೆ ಇದೆ.
ಒಟ್ಟಿನಲ್ಲಿ ಈ ಪುಸ್ತಕ RSS ನ ಆಳ ಅಗಲವನ್ನು ಮುಟ್ಟಿಲ್ಲವಾದರೂ ಒಂದು ಪ್ರಯತ್ನವಂತೂ ಮಾಡಿದೆ. ಇದನ್ನು ಒಪ್ಪದವರು ಇದನ್ನು ವೈಚಾರಿಕವಾಗಿಯೇ ಎದಿರುಗೊಳ್ಳಬೇಕು ಮತ್ತು ಇಲ್ಲಿ ಎತ್ತಲ್ಪಟ್ಟಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಬೇಕು ಎನ್ನುವುದು ಈ ಬರಹದ ಆಶಯ!
Comments
Post a Comment