ಈ ಹೆಸರೇ ವಿಚಿತ್ರವಾಗಿದೆಯಲ್ಲ ಎಣಿಸಿ ಆಗ ಬಾಲಮಂಗಳದಲ್ಲಿ ಬರುತ್ತಿದ್ದ "ಡಿಂಗ" ನನ್ನ ನೆನಪಿಸಿಕೊಂಡೆ! ಆಮೇಲೆ ಗೇಬ್ರಿಯಲ್ ಗಾರ್ಸಿಯನ " Of love and demons " ನಲ್ಲಿ ಡುಮಿಂಗ ಎಂಬ ಪಾತ್ರ ಇರೋದು ನೋಡಿ ಇದೊಂದು ನಿಜ ಹೆಸರು ಎಂಬುದು ಖಾತ್ರಿಯಾಯ್ತು!
ಶಶಿ ತರೀಕೆರೆಯವರ ಮೊದಲ ಕಥಾ ಸಂಕಲನದ ಮೂಲ ದ್ರವ್ಯ ಮನುಷ್ಯಪ್ರೀತಿ. ಒಮ್ಮೆ ಎಸ್ ದಿವಾಕರ್ ಹೇಳಿದ್ದರು " Short stories are about the people who are submerged in the society " ಅಂತ. ಅಂದರೆ ಸಣ್ಣ ಕಥೆಗಳು ಸಮಾಜದಲ್ಲಿ ಇದ್ದು ಇರದ, ಸಾಮಾನ್ಯವಾಗಿ ಯಾರೂ ಗುರುತಿಸದ ಅಷ್ಟಾಗಿ ತಲೆಕೆಡಿಸಿಕೊಳ್ಳದವರ ಬಗ್ಗೆಯೇ ಆಗಿರುತ್ತದೆ ಮತ್ತು ಆಗಿರಬೇಕು ಕೂಡ.
ಶಶಿಯವರ ಕಥೆಗಳಲ್ಲಿ ಇದು ಸರಳ ಮತ್ತು ಸ್ಪಷ್ಟವಾಗಿ ಬಂದಿದೆ.
ವಿಚಿತ್ರ ಹೆಸರಿಟ್ಟುಕೊಂಡದ್ದರಿಂದ ಅವಹೇಳನಕ್ಕೆ ಒಳಗಾಗುವ "ಡುಮಿಂಗ" ಕಥೆ ಬೆಸಗರಹಳ್ಳಿ ರಾಮಣ್ಣರ "ಗಾಂಧಿ" ಯನ್ನ ನೆನಪಿಸಿದರೆ, "ಮುಗಿಲಿನ ಕರೆ" ಕಥೆ ಖಾಸನೀಸರ " ತಬ್ಬಲಿಗಳು " ಕಥೆಯನ್ನು ನೆನಪಿಸುತ್ತದೆ. ಆದರೆ ಇವು ಆ ಕಥೆಗಳಿಗಿಂತ ಬಹಳ ಭಿನ್ನವಾಗಿದೆ ಎಂಬುದನ್ನು ಸ್ಪಷ್ಟ ಹೇಳಬೇಕು. "ಜೀನಿ " ಸಂಬಂಧಗಳ ಸಂಕೀರ್ಣತೆಯನ್ನು "ಪ್ರಣಯ ರಾಜ " ಕಥೆ ಅವುಗಳ ವ್ಯಾವಹಾರಿಕತೆಯನ್ನು, "ಜನರಲ್ ವಾರ್ಡ್ " ಅಮಾಯಕತೆಯನ್ನು, "ಜಾದೂಗಾರನ ನಿದ್ದೆ" ನಿಷ್ಕಾರಣ ಪ್ರೀತಿಯನ್ನು ಬಿಂಬಿಸಿದರೆ, "ಜಾಗರಣೆ " ಕಥೆ ಕುರುಡುಗತ್ತಲಲಿ ಅಮೃತಕ್ಷಣದ ತಲಾಶಿನಲ್ಲಿ, ಅಲ್ಲಲ್ಲಿ abstract ಆಗುತ್ತಾ ರೋಮಾಂಚನ ಗೊಳಿಸುತ್ತಾ ಸಾಗುತ್ತದೆ....
ಒಟ್ಟಾರೆ ಶಶಿಯ ಕಥೆಗಳು ಆ "Submerged " ಮನುಷ್ಯರನ್ನ ಹುಡುಕಿ ಮೇಲೆತ್ತಿ ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡಿವೆ. ಯಾವುದನ್ನೂ ಸರಿ ತಪ್ಪು ಎಂದು ವಿಮಾರ್ಶಿಸುವ ಗೋಜಿಗೆ ಹೋಗದೆ, ಓದುಗನ ವಿವೇಚನೆಗೆ ಬಿಟ್ಟಿರುವುದು ಇವುಗಳ ಪ್ರಮುಖ ಅಂಶ ಎಂದು ನನಗೆ ಅನಿಸುತ್ತದೆ.
Comments
Post a Comment