ನಲ್ಮೆಯ ನರೇಂದ್ರ ಸರ್ ನಮಸ್ತೆ
ಹೇಗಿದ್ದೀರಾ....ನನ್ನ ನೆನಪುಂಟಾ? ಕಳೆದ ತಿಂಗಳು ಊರಿಗೆ ಬಂದಾಗ ನೀವು ಪ್ರೀತಿಯಿತ್ತು ಕಳುಹಿಸಿದ "ಕನುಸುಗಳು ಖಾಸಗಿ " ಓದಿದೆ. ಎಲ್ಲ ಕಥೆಗಳೂ ಕುತೂಹಲವನ್ನು ಉದ್ದೀಪಿಸುವಲ್ಲಿ ಯಶಸ್ವಿಯಾಗಿವೆ.
'ರುಕ್ಕುಮಣಿ'ಯಲ್ಲಿನ ಅಮ್ಮನ ಪೂರ್ವ ಮತ್ತು ಮಗಳ ಪ್ರಸ್ತುತ ಗಳ ನಡುವಿನ ಜಿಜ್ಞಾಸೆ, ಮನೆಯ ಕಾಪಾಟದಲ್ಲಿ ಬಂಧಿಯಾಗಿದ್ದ ಗುಟ್ಟುಗಳು, ರುಕ್ಕು ಮತ್ತು ರೋಜ್ ಎಂಬ ಭಿನ್ನಗಳು , ಅಮ್ಮ ಬಿಟ್ಟು ಬಂದದನ್ನ ಮಗಳು ಅರಸಿ ಹೊರಟಿದ್ದು ಮತ್ತು ಬಲಿಯಾಗಿದ್ದು!
'ಕೆಂಪು ಹಾಲಿ'ನ revealed and unrevealed, ಮುಗ್ಧತೆ ಮತ್ತು ಕ್ರೌರ್ಯ (ಹಾಲು ಮತ್ತು ರಕ್ತ ಅಂದುಕೊಳ್ಳುತ್ತಾ ), 'ಭೇಟಿ'ಯಲ್ಲಿನ ಮೀರುವಿಕೆ ಮತ್ತು ನೀರರ್ಥಕತೆ, 'ರಿಕವರಿ'ಯ ಅಸಹಾಯಕತೆ ಮತ್ತು ವಾಸ್ತವ, 'ಅಜ್ಜಿಯ ಕಥೆ'ಯಲ್ಲಿ ಕಾಣಿಸುವ ಮನೋವ್ಯಾಪಾರ ಮತ್ತು ಅಷ್ಟೇ ಔದಾರ್ಯ, 'ಹಿಂಸಾರೂಪೇಣ'ದಲ್ಲಿನ ಹಸಿ ವ್ಯಂಗ್ಯ, 'ಸಾಕ್ಷಿ'ಯ contradiction ಮತ್ತು ಇವೆಲ್ಲ ಕಥೆಗಳಿಗೂ ಅವುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸೂಕ್ತ ಆನಿಸುವಂತ " ಕಥನ ಕುತೂಹಲ" ಕಥೆ ನನಗೆ ಬಹಳವಾಗಿ ಹಿಡಿಸಿತು.
ಆದರೆ ''ಕನಸುಗಳು ಖಾಸಗಿ'' ಕಥೆ ನನಗೆ ತುಂಬಾ ಡ್ರಾಮ್ಯಾಟಿಕ್ ಅನ್ನಿಸಿತು, ಸಿನಿಮೆಯ ರೀತಿ ಅನ್ನಬಹುದು.
ಈ ಎಲ್ಲಾ ಕಥೆಗಳನ್ನೂ ಒಂದೇ ಗುಕ್ಕಿನಲ್ಲಿ ಓದಿದೆ. ಯಾವ ಕಥೆಯೂ ಕುತೂಹಲವನ್ನು ಸಡಿಲಿಸಲಿಲ್ಲ. ನಿಮ್ಮ ಇನ್ನಷ್ಟು ಕಥೆಗಳನ್ನು ಓದುವ ಮನಸಾಗಿದೆ. ಕೊಂಡು ಓದುವೆ ಖಂಡಿತಾ
ಇಂತಿ ನಿಮ್ಮ ಪ್ರೀತಿಯ
ದರ್ಶನ್ ಜಯಣ್ಣ
Comments
Post a Comment