ಕಡೆಗೆ ....... ಹೇಳದೆಯೂ ಎಲ್ಲವನ್ನು ಹೇಳಿಬಿಡುವ, ಹೇಳಿಯೂ ಕುತೂಹಲವನ್ನು ಹಾಗೇ ಕಾಯ್ದಿರಿಸುವ ಕಾದಂಬರಿ " ಘಾಚಾರ್ ಘೋಚರ್ ". ಒಂದು ವಾಕ್ಯ ಬಿಡಿ, ಒಂದು ಪದವನ್ನೂ ವ್ಯರ್ಥ ಬಳಸಿದ ಕುರುಹು ಸಿಕ್ಕರೆ ಕೇಳಿ ! ಇಲ್ಲಿ ಹಲವು "ಬೀಜವಾಕ್ಯಗಳಿವೆ !" ನೀವು ಓದಿದ ಒಳ್ಳೆಯ ಪದ್ಯ ಕಾಲಕಾಲಕ್ಕೆ ಏನೇನನ್ನೋ ಧ್ವನಿಸುವಂತೆ, ತಲ್ಲಣಿಸುವಂತೆ , ಮೈನವಿರೇಳಿಸುವಂತೆ.
ಇಲ್ಲಿ ಕಾಣುವ 'Vincent ' ನಮ್ಮ ಸುಪ್ತ ಮನಸ್ಸನ್ನು ಅರಿತ ಮತ್ತು ಅದರ ಭಾಗವೇ ಆಗಿಹೋಗಿರುವ 'waiter ' . ಈ ಕೃತಿಯನ್ನು ಮಹಾನಗರದ ತಲ್ಲಣವನ್ನು ಅರಿತ ಎನ್ನುವುದಕ್ಕಿಂತಾ ..... ಕುಟುಂಬ ಒಂದರ ತಲ್ಲಣವನ್ನು ' ಧ್ಯಾನಿಸಿ ', ಶೋಧಿಸಿ , ಹೆಕ್ಕಿ ತೆಗೆದ ಕಥೆಯಿದು. ಗಾಢವಾಗುವುದಕ್ಕೆ ಸಂಬಂಧ ಕಾರಣಗಳು ಬೇಕಿದ್ದರೂ "ಹಗುರವಾಗಲಿಕ್ಕೆ " ಒಂದು ಅಡ್ಡಹೆಸರು ಸಾಕು ಎನ್ನುವ , ಪ್ರೀತಿಗೆ ( ಅಥವಾ ಹೊಂದಾಣಿಕೆಗೆ !!!) ಅರ್ಹವಿರದವರು ಅಡ್ಡ ಹೆಸರನ್ನು ಇಡಿಸಿಕೊಳ್ಳಲೂ ಅನರ್ಹರು ಎಂಬ ಸಂಗತಿಯೇ ಬೆಚ್ಚಿಬೀಳಿಸುವಂಥದ್ದು. ಈ ಕಥೆಯನ್ನು ಸಮಾಜಕ್ಕೆ ವಿಸ್ತರಿಸಿ ನೋಡಿದರೆ ಇನ್ನಷ್ಟು ದಿಗ್ಬ್ರಮೆಯಾಗುತ್ತದೆ !
"ಅದ್ಯಾಕೋ ನಮ್ಮ ಮಧ್ಯೆ ಮೃದುವಾದದ್ದು ಏನೂ ಹುಟ್ಟಲೇ ಇಲ್ಲ ! " ಎಂಬ ಮಾತನ್ನು ಇಲ್ಲಿನ ಎಲ್ಲ ಪಾತ್ರಗಳ ನಡುವಿನ ಸಂಬಂಧಗಳಿಗೂ ಅನ್ವಹಿಸಬಹುದು. ಇಲ್ಲಿ ಸಂಭಂದಗಳು ಖೊಟ್ಟಿಯೋ ಅಥವಾ ಕಟು ವಾಸ್ತವದ ಕನ್ನಡಿಯೋ ಒಟ್ಟಿನಲ್ಲಿ ಓದುಗನನ್ನು ದಂಗು ಬಡಿಸುತ್ತವೆ .... ನಿಜದಿಂದ !
ಸರಳವಾದರೂ ವಿಶಿಷ್ಟವಾದ ನಿರೂಪಣೆ ಈ ಕಾದಂಬರಿಯ ಮೂಲಶಕ್ತಿ.
ನಿರೂಪಕನ ನಾಜೂಕಾದ ಬೆರಳುಗಳನ್ನು ನೀವೂ ಜಾಗ್ರತೆಯಿಂದ ಹಿಡಿದಿರೆಂದರೆ, ನಿಮಗೆ ಜರೂರಿಯಾಗಿ ಬೇಕಾದುದೇನೋ ಸಿಗುತ್ತದೆ ....
ದರ್ಶನ್ ಜಯಣ್ಣ

Comments
Post a Comment