ಬರ ಎಂದರೆ ಎಲ್ಲರಿಗೂ ಇಷ್ಟ ( Everybody loves a good drought by P Sainath ) ಪುಸ್ತಕವನ್ನ G N Mohan ರವರು ಕನ್ನಡಕ್ಕೆ ತಂದಾಗ ಅದರ ಪ್ರತಿಗಳನ್ನು ಮುಂಗಡ ಕೊಳ್ಳು ವುದಕ್ಕೆ ಅವಕಾಶ ಕಲ್ಪಿಸಿದ್ದರು.
ನಾನು P Sainath ರವರ ಪರಮಾಭಿಮಾನಿ ! ದುಂಬಾಲು ಬಿದ್ದು ಲಿಂಕನ್ನು ಒತ್ತಿದೆ, ಅಲ್ಲಿ ಕೇಳಿದ್ದ ಹೆಸರು ವಿಳಾಸ ತುಂಬಿದೆ. ಹಣ ಸಂದಾಯಕ್ಕೆ ಯಾವುದೇ ಅವಕಾಶವಿರದ ಕಾರಣ ಬಹುಷಃ ಯಾರಾದರೂ ನನ್ನನ್ನು ಮುಂದೆ ಸಂಪರ್ಕಿಸಬಹುದು ಎಂದು ಸುಮ್ಮನಾದೆ. ಮೂರ್ನಾಲ್ಕು ದಿನಕಳೆದ ನಂತರ ಒಂದು ಪಾರ್ಸಲ್ ಬಂತು ತೆರೆದು ನೋಡಿದರೆ ಪುಸ್ತಕ ಬಂದಿದೆ !!!
ಕಾಸೇ ಕೊಡದೆ 350 ರೂಪಾಯಿಯ ಪುಸ್ತಕವೇ ??? ಪುಟ ತಿರುವಿದಾಗ ಅದರಲ್ಲಿ ಇಲ್ಲಿ ಲಗತ್ತಿಸಿರುವ ಚೀಟಿ ಸಿಕ್ಕಿತು !
ಅಭಿನವ ಪ್ರಕಾಶನ ಮತ್ತು ಜಿ ಏನ್ ಮೋಹನ್ ಗೊತ್ತೇ ಇರದ ನನ್ನಂತಹ ಓದುಗನನ್ನ ನಂಬಿದ್ದು ಆಶ್ಚರ್ಯ ತರಿಸಿತು .....ನಂತರ ಹಣ ಸಂದಾಯ ಮಾಡಿದೆ !
ಅಡ್ವಾನ್ಸ್ ಬುಕಿಂಗ್ನ ಕಾಲದಲ್ಲಿ ಇದು ನಿಜವಾಗಿಯೂ ಅವಿಸ್ಮರಣೀಯ

Comments
Post a Comment