ಕೆಲವೊಮ್ಮೆ ಮಕ್ಕಳಿಗೆ ತಂದಿಟ್ಟ ಐಸ್ ಕ್ರೀಮ್ನ ನಾವೇ ತಿಂದು ಬಿಡ್ತೀವಿ .....ತಡೆದುಕೊಳ್ಳಲಾಗದೇ !
ನಾನು “ ಮುಲ್ಲಾ ನಸೀರುದ್ದೀನ್ “ ಕಥೆಗಳನ್ನ ಓದಿದ್ದು ಹಾಗೇನೇ.
ಎಲ್ಲವರ್ಗದವರಿಗೂ ಇಲ್ಲಿ ಏನೋ ಸಿಗುತ್ತದೆ ....ನಮ್ಮೊಳಗೇ ಒಬ್ಬ ನಸೀರುದ್ದೀನ್ ಇರುತ್ತಾನೆ ಅವನು ಉಡಾಫೆ, ಹಾಸ್ಯ, ಸೋಂಬೇರಿತನ, ಆದ್ಯಾತ್ಮ ಮತ್ತು ಅದೆಲ್ಲವನ್ನೂ ಮೀರಿ ಮತ್ತೇನೋ ಆಗುತ್ತಿರುತ್ತಾನೆ !
ಅವನ ಕೆಲವು ಉತ್ತರಗಳು ಪ್ರಶ್ನೆಯನ್ನ ಅಣಕಿಸುವಂತೆ ಇದ್ದರೆ, ಮತ್ತೊಂದಷ್ಟು ಅವನನ್ನೇ ಅಣಕಿಸಿಕೊಂಡಂತೆ ಇರುತ್ತವೆ. ಕೆಲವು ಉತ್ತರಗಳು ಎಷ್ಟು ಲೌಕಿಕವೋ ಮತ್ತೆ ಕೆಲವು ಅಷ್ಟೇ ಅಲೌಕಿಕ ....ಕೆಲವು ಪೂರ್ಣ ಅನಿಸಿದರೆ ಮತ್ತೆ ಕೆಲವನ್ನು ನಾವೇ ತುಂಬಿಕೊಳ್ಳ ಬೇಕು !
ಸೂರಿಯವರ “ ದಿ ಇನ್ಕ್ರೆಡಿಬಲ್ ಮುಲ್ಲಾ ನಸೀರುದ್ದೀನ್” ನಾಟಕವನ್ನು ಮಕ್ಕಳೊಡನೆ ನೋಡಿದ ನನಗೆ ಜೋಗಿಯವರ “ ಒಂದಾನೊಂದು ಕಾಲದಲ್ಲಿ ....ರೀಟೆಲ್ಲಿಂಗ್ ಮುಲ್ಲಾ ನಸೀರುದ್ದೀನ್ “ ತುಂಬಾ ಖುಷಿ ಕೊಟ್ಟ ಪುಸ್ತಕ ....ಲ್ಯಾಬ್ನಲ್ಲಿ ಕುಂತು ಒಂದೆರಡು ಗಂಟೆಗಳ ಅವಧಿಯಲ್ಲಿ ಮುಗಿಸಿದೆ ...ಕೆಲಸದ ಮಧ್ಯೆ !
Comments
Post a Comment