ಪ್ರಸನ್ನ ಸರ್, ತಮ್ಮ ಬಹುಚರ್ಚಿತ ಕಾದಂಬರಿ "ಸು" ಓದಿದೆ. ಒಬ್ಬ ಸಂಶೋಧಕನಾಗಿ ನನಗೆ ಕೃತಿಯ ವಸ್ತುವಿನ ಬಗ್ಗೆ ತುಂಬಾ ಕುತೂಹಲವಿದ್ದದ್ದರಿಂದ ನೀವು ಅದನ್ನ ಇನ್ನಷ್ಟು ಮುಂದುವರಿಸಬಹುದಿತ್ತು ಅನ್ನಿಸಿತು. ಇದು ನನಗೆ ಕಾದಂಬರಿಯ ಜೊತೆ ಜೊತೆಗೆ ನೆನಪಿನ ಆತ್ಮೀಯ ಕಥನ ಅನ್ನಿಸಿತು. ನಡುನಡುವೆ 'ಸು' ಗೆ ಮತ್ತು ಪ್ರಕಾಶನಿಗೆ ಬರುವ abstract ಕನಸುಗಳು ಮತ್ತು ಆಲೋಚನೆಗಳು ಕುತೂಹಲ ಹುಟ್ಟಿಸಿದವು. ಇದು ಒಂದು ರೀತಿ ಬೇರೆಯೇ ಪ್ರಯೋಗ! ತುಂಬಾ ವಿಷಯಗಳನ್ನ ಒಂದೇ ಕಾದಂಬರಿಯಲ್ಲಿ ತಂದಿದ್ದೀರಿ. 'ಸು' ಎಂಬ ಚೀನಿ ಮನುಷ್ಯ ಸ್ವಾರಸ್ಯಕರವಾಗಿದ್ದಾನೆ. ಅವನ ಬಗ್ಗೆ ನೀವು ಪ್ರಬಂಧಗಳನ್ನು ಬರೆಯಬೇಕು. ಬಹುಷಃ ಅಲ್ಲಿ ಕಾದಂಬರಿಯ ಮಾದರಿಯಲ್ಲಿ ಇಲ್ಲಿ ಹೇಳಲಾಗದ ಮಾತುಗಳನ್ನು, ವಿಚಾರಗಳನ್ನು ಹೇಳಬಹುದೇನೋ? ಈ ಕೃತಿಯ 'ವಸ್ತು' ಗೆದ್ದಿದೆ. ಆದರೆ ಯಾಕೋ ಇದೊಂದು ಅತೀ ಮಹತ್ವದ ಕೃತಿಯಾಗಬಹುದಿತ್ತೇನೋ ಎಂದು ನನಗೆ ಓದಿದ ಕ್ಷಣಕ್ಕೆ ಅನಿಸತೊಡಗಿದೆ. ಒಂದು ವಿಭಿನ್ನ ಪ್ರಯತ್ನಕ್ಕಾಗಿ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.