Sethuram Sn ‘ ನಾವಲ್ಲ ‘ ಇದು ಇಂದಿನ ಮತ್ತು ಎಂದಿನ ಸಮಸ್ಯೆ ! ಮಾಡುವುದನ್ನೆಲ್ಲಾ ಮಾಡಿ ಆಡುವುದನ್ನೆಲ್ಲಾ ಆಡಿ ಮತ್ಯಾರನ್ನೋ ದೋಷಿಸಿ ನಾವು ಪಲಾಯನಗೊಳ್ಳುವುದು ! S N ಸೇತುರಾಂ ಅದ್ಭುತ ವಾಗ್ಮಿ ಮತ್ತು ತಮ್ಮದೇ ಆದ ವಿಶೇಷ ರೆಂಡರಿಂಗ್ ಇರುವವರು. ಅವರ ಧಾರಾವಾಹಿಗಳನ್ನು ನೋಡಿರುವವರಿಗೆ ಈ ಕಥೆಗಳನ್ನು ಓದುವಾಗ ಅವರ ರೆಂಡರಿಂಗ್ ಅಥವಾ “ ಡೈಲಾಗ್ ಡೆಲಿವರಿ “ ಯ ಛಾಯೆ ಬಿಡದಿರದು ! ನಾನೂ ಈ ಎಲ್ಲಾ ಕಥೆಗಳನ್ನೂ ಹಾಗೆಯೇ ಓದಿದ್ದು ! ಹೆಣ್ಣಿನ ಬದುಕನ್ನು ಗಂಡಿನ ಕುಹಕನ್ನು ಏಕ ಕಾಲದಲ್ಲಿ ಅಭಿವ್ಯಕ್ತಿಗೊಳಿಸುವ ಇಲ್ಲಿನ “ ಮೌನಿ, ಸ್ಮಾರಕ , ಕಾತ್ಯಾಯಿನಿ “ ಮುಂತಾದ ಕಥೆಗಳು ಓದುಗನನ್ನು ಕಂಗಾಲಾಗಿಸುತ್ತವೆ ಅಥವಾ ನಿಷ್ಟೂರವಾಗಿ ಹೇಳಬೇಕೆಂದರೆ ಬೆತ್ತಲುಗೊಳಿಸುತ್ತವೆ! ಅದರಲ್ಲೂ ಓದುಗ ಗಂಡಾಗಿದ್ದರೆ ಕೆನ್ನೆಯ ಮೇಲೊಂದು ಬಾರಿಸುತ್ತದೆ ! ‘ ಮೋಕ್ಷ ‘ ಕಥೆಯಲ್ಲಿ ದಾರಿ ತೋರುವವನೇ ಅಥವಾ ಹಾಗೆಂದು ನಂಬಿಸಿ ಪೀಠದಲ್ಲಿ ಕೂರಿಸಿದವನೇ ತನ್ನ ಮೋಕ್ಷಕ್ಕೆ ತಿಕ್ಕಾಡಿ ಕಡೆಗದನ್ನು ಹೋರಾಟ ಮಾಡಿ ಪಡೆದುಕೊಂಡು ತನ್ನನ್ನು ನಂಬಿದವರನ್ನೆಲ್ಲ ಧಿಗ್ಬ್ರಮೆ ಗೊಳಿಸುವುದು ಅರ್ಥವತ್ತಾಗಿದೆ ! ‘ ಸಂಭವಾಮಿ’ ಕಥೆಯು ಮೂರೂ ಬಿಟ್ಟವರು ಧರೆಗೆ ದೊಡ್ಡವರು ಎಂಬುದನ್ನು ಸಾರುತ್ತಲ್ಲೇ ಮನುಷ್ಯನ ಖಿಲಾಡಿತನವನ್ನು ಬುದ್ಧಿವಂತಿಕೆಯನ್ನು ಒಂದು ಕಡೆ ಇಟ್ಟು ಧರ್ಮ ಕರ...