Skip to main content

Posts

Showing posts from April, 2019
" ಹೀಗಿದ್ದರು ಕುವೆಂಪು " ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ ! ಸಾಧಾರಣವಾಗಿ ನಾನು ಇಷ್ಟುಬೇಗ ಯಾವ ಪುಸ್ತಕವನ್ನೂ ಓದುವುದಿಲ್ಲ , ಆ ಮಟ್ಟಿಗಿನ ಏಕಾಗ್ರತೆ ಕೊರತೆ ನನ್ನ ಬಲಹೀನತೆಗಳಲ್ಲಿ ಒಂದು ! ಈ ಪುಸ್ತಕವನ್ನು ಬರೆದವರು ಪ್ರಾತಃಸ್ಮರಣೀಯರಾದ  ಡಾ. ಪ್ರಭುಶಂಕರರು ಕುವೆಂಪು ಅವರ ಮಾನಸ ಪುತ್ರ ಎಂದೇ ಕರೆಯಿಸಿಕೊಂಡ ಶ್ರೀಯುತರು, ತಾವು ಕಂಡಂತೆ ಕುವೆಂಪು ಹೇಗಿದ್ದರು ಎಂಬುದನ್ನು ವಿವರಿಸಿದ್ದಾರೆ. ಅವರೇ ಹೇಳುವಂತೆ ವಯಸ್ಸಿನ ಕಾರಣದಿಂದ ಬಹಳಷ್ಟು ವಿಷಯಗಳು ಪುಸ್ತಕದಿಂದ ದುರದೃಷ್ಟವಶಾತ್ ದೂರಾಗಿವೆ ! ಆದಾಗ್ಯೂ , ಕುವೆಂಪುರವರ  ಗುರುಭಕ್ತಿ, ವೈಸ್ ಚಾನ್ಸಲರ್ ಹುದ್ದೆ, ರಾಮಕೃಷ್ಣ-ವಿವೇಕಾನಂದರ ಬಗ್ಗೆ ಅವರಿಗೆ ಇದ್ದ ಅಪಾರವಾದ ಗೌರವ, ಪಾಠ ಪ್ರವಚನಗಳನ್ನ ಮಾಡುತಿದ್ದ ರೀತಿ,  ಸ್ವವಿಮರ್ಶಾ ಮನೋಭಾವ, ಗಾಂಭೀರ್ಯ ಮತ್ತು ಹಾಸ್ಯ ಪ್ರವೃತ್ತಿ, ಅವರ ತಲ್ಲಣಗಳು, ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ, ಸಮಯ ಹಾಳುಮಾಡದೆ ಬರೆವುದನ್ನೇ ರೂಡಿಸಿಕೊಂಡ ಪರಿ....... ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಓದಿ ಅವರ ಮೇಲೆ ಇಲ್ಲಿಯವರೆವಿಗೂ ಇದ್ದ ಪೂಜ್ಯ ಮನೋಭಾವ ಪ್ರೀತಿಯಾಗಿ ಮಾರ್ಪಟ್ಟಿತು ! ಗಮನಿಸಿ :  ತೇಜಸ್ವಿಯವರ ಬಗ್ಗೆ ಏನಾದರೂ ಇರಬಹುದೇ ಎಂದು ಹುಡುಕಿದವನಿಗೆ ..... ಕುವೆಂಪುರವರ ಕಾರಿನಲ್ಲಿ ಬಂಧಿಯಾಗಿದ್ದ ಬಾಲಕರಾದ "ತೇಜಸ್ವಿ ಮತ್ತು ಚೈತ್ರ " ಮಾತ್ರ ಇದಿರಾದರು ! ವಿಶ್ವಮಾನವ ಸಂದೇಶ ಸಾರಿದ...
ಕಡೆಗೆ ....... ಹೇಳದೆಯೂ ಎಲ್ಲವನ್ನು ಹೇಳಿಬಿಡುವ, ಹೇಳಿಯೂ ಕುತೂಹಲವನ್ನು ಹಾಗೇ ಕಾಯ್ದಿರಿಸುವ ಕಾದಂಬರಿ               " ಘಾಚಾರ್ ಘೋಚರ್ ". ಒಂದು ವಾಕ್ಯ ಬಿಡಿ, ಒಂದು ಪದವನ್ನೂ ವ್ಯರ್ಥ ಬಳಸಿದ ಕುರುಹು ಸಿಕ್ಕರೆ ಕೇಳಿ ! ಇಲ್ಲಿ ಹಲವು "ಬೀಜವಾಕ್ಯಗಳಿವೆ !" ನೀವು ಓದಿದ ಒಳ್ಳೆಯ ಪದ್ಯ ಕಾಲಕಾಲಕ್ಕೆ ಏನೇನನ್ನೋ ಧ್ವನಿಸುವಂತೆ, ತಲ್ಲಣಿಸುವಂತೆ , ಮೈನವಿರೇಳಿಸುವಂತೆ. ಇಲ್ಲಿ ಕಾಣುವ   'Vincent ' ನಮ್ಮ ಸುಪ್ತ ಮನಸ್ಸನ್ನು ಅರಿತ ಮತ್ತು ಅದರ ಭಾಗವೇ ಆಗಿಹೋಗಿರುವ 'waiter ' . ಈ ಕೃತಿಯನ್ನು ಮಹಾನಗರದ ತಲ್ಲಣವನ್ನು ಅರಿತ ಎನ್ನುವುದಕ್ಕಿಂತಾ ..... ಕುಟುಂಬ ಒಂದರ ತಲ್ಲಣವನ್ನು ' ಧ್ಯಾನಿಸಿ ', ಶೋಧಿಸಿ , ಹೆಕ್ಕಿ ತೆಗೆದ ಕಥೆಯಿದು. ಗಾಢವಾಗುವುದಕ್ಕೆ ಸಂಬಂಧ ಕಾರಣಗಳು ಬೇಕಿದ್ದರೂ "ಹಗುರವಾಗಲಿಕ್ಕೆ " ಒಂದು ಅಡ್ಡಹೆಸರು ಸಾಕು ಎನ್ನುವ , ಪ್ರೀತಿಗೆ ( ಅಥವಾ ಹೊಂದಾಣಿಕೆಗೆ !!!) ಅರ್ಹವಿರದವರು ಅಡ್ಡ ಹೆಸರನ್ನು ಇಡಿಸಿಕೊಳ್ಳಲೂ ಅನರ್ಹರು ಎಂಬ ಸಂಗತಿಯೇ ಬೆಚ್ಚಿಬೀಳಿಸುವಂಥದ್ದು. ಈ ಕಥೆಯನ್ನು ಸಮಾಜಕ್ಕೆ ವಿಸ್ತರಿಸಿ ನೋಡಿದರೆ ಇನ್ನಷ್ಟು ದಿಗ್ಬ್ರಮೆಯಾಗುತ್ತದೆ ! "ಅದ್ಯಾಕೋ ನಮ್ಮ ಮಧ್ಯೆ ಮೃದುವಾದದ್ದು ಏನೂ ಹುಟ್ಟಲೇ ಇಲ್ಲ ! " ಎಂಬ ಮಾತನ್ನು ಇಲ್ಲಿನ ಎಲ್ಲ ಪಾತ್ರಗಳ ನಡುವಿನ ಸಂಬಂಧಗಳಿಗೂ ಅನ್ವಹಿಸಬಹುದು. ಇಲ್ಲಿ ಸಂಭಂದಗಳು ಖೊಟ್ಟಿಯೋ ಅಥ...